ಕಲಾಕೃತಿಗಳಲ್ಲಿ ಬದುಕಿನ ಹೆಜ್ಜೆಗಳು

7

ಕಲಾಕೃತಿಗಳಲ್ಲಿ ಬದುಕಿನ ಹೆಜ್ಜೆಗಳು

Published:
Updated:
ಕಲಾಕೃತಿಗಳಲ್ಲಿ ಬದುಕಿನ ಹೆಜ್ಜೆಗಳು

ಕಲಾವಿದರ ಬದುಕು, ಅವರು ಪ್ರಕೃತಿಯನ್ನು ಗ್ರಹಿಸುವ ರೀತಿಯನ್ನು ಕಲಾಕೃತಿಗಳು ಸಾರಿ ಹೇಳುತ್ತವೆ.

ಪ್ರೊ.ಕೆ.ಎಸ್. ಅಪ್ಪಾಜಯ್ಯ ಅವರ ಕಲಾಕೃತಿಗಳೂ ಇದಕ್ಕೆ ಹೊರತಲ್ಲ. ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಲಾ ಮಹಾವಿದ್ಯಾಲಯದಲ್ಲಿ 40 ವರ್ಷಗಳ ಕಾಲ ಬೋಧಿಸಿದ ಅವರ ಕಲಾಕೃತಿಗಳು ಜೀವನಾನುಭವದ ಕ್ಷಣಗಳಿಂದ ದಟ್ಟೈಸಿದೆ. ಕೆಲ ಕಲಾಕೃತಿಗಳನ್ನು ನೋಡುವಾಗ ನಮ್ಮದೇ ಬಾಲ್ಯ ನೆನಪಿಗೆ ಬರುವುದು ವಿಶೇಷ.

ಶಾಯಿ (ಇಂಕ್), ಇದ್ದಿಲು, ಜಲವರ್ಣಗಳ ಮಿಶ್ರ ಮಾಧ್ಯಮದಲ್ಲಿ ಕಲಾಕೃತಿಗಳನ್ನು ರೂಪಿಸಿದ್ದಾರೆ. ಪ್ರದರ್ಶನದಲ್ಲಿರುವ 11 ಕಲಾಕೃತಿಗಳಲ್ಲಿ ಬಾಲ್ಯ, ತಾಯಿ, ಪ್ರೀತಿ, ನೋವು, ನಲಿವುಗಳನ್ನು ಬಿಂಬಿಸಿದ್ದಾರೆ. ಮನೆಯ ಮುಖ್ಯದ್ವಾರವನ್ನು ಲಕ್ಷ್ಮಿ ಎಂದು ಪೂಜಿಸುವ ಪರಿಕಲ್ಪನೆಯೂ ಇವರ ಕಲಾಕೃತಿಗಳಲ್ಲಿ ಹಾಸುಹೊಕ್ಕಾಗಿದೆ.

ವಿಭೂತಿ ಉಂಡೆಗಳನ್ನೇ ಬಳಸಿ ಕಲಾಕೃತಿಯೊಂದನ್ನು ರೂಪಿಸಿದ್ದಾರೆ. ಮನುಷ್ಯ ಬದುಕಿದ್ದಾಗ ನಾವು ಏನೇ ಮಾಡಿದರೂ ಸತ್ತಮೇಲೆ ಬೂದಿಯಾಗುತ್ತಾನೆ ಎಂಬುದನ್ನು ಇದು ಸಂಕೇತಿಸುತ್ತದೆ. ಇವರ ಕಲಾಕೃತಿಗಳಲ್ಲಿ ಬದುಕಿನ ಹಲವು ಹಂತಗಳ ಸಂವೇದನೆಗಳು ಇವೆ.

ಬೆಂಗಳೂರು, ದೆಹಲಿ, ಕೋಲ್ಕತ್ತಾ ಜೊತೆಗೆ ವಿದೇಶಗಳಲ್ಲಿಯೂ ಕಲಾ ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ. ಬಸವಣ್ಣ ಮತ್ತು ಬುದ್ಧ ನನಗೆ ಸ್ಫೂರ್ತಿ ಎನ್ನುವುದು ಅವರ ಮನದ ಮಾತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry