ಮಾ. 4, 5ರಂದು ರಾಷ್ಟ್ರಕೂಟ ಉತ್ಸವ

7

ಮಾ. 4, 5ರಂದು ರಾಷ್ಟ್ರಕೂಟ ಉತ್ಸವ

Published:
Updated:

ಕಲಬುರ್ಗಿ: ಮಾ.4 ಮತ್ತು 5 ರಂದು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ರಾಷ್ಟ್ರಕೂಟ ಉತ್ಸವ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.

ಸಾಹಿತಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಈ ವಿಷಯ ತಿಳಿಸಿದರು.ಎರಡು ದಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ಉತ್ಸವ ನಡೆಯಲಿದೆ. ಸಾಂಸ್ಕೃತಿಕ ಉತ್ಸವವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸಿದರೆ ಸಾಹಿತ್ಯವನ್ನು ಕರ್ನಾಟಕ ಕೇಂದ್ರೀಯ ವಿವಿ ಹಾಗೂ ಗುಲಬರ್ಗಾ ವಿವಿ ವಹಿಸುವವು.

ಉತ್ಸವಕ್ಕೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹30 ಲಕ್ಷ ಬಿಡುಗಡೆ ಮಾಡಿದೆ. ಉಳಿದ ಖರ್ಚು ವೆಚ್ಚವನ್ನು ಎಚ್ ಕೆಆರ್ ಡಿಬಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಸಹಾಯ ಪಡೆಯಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry