ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಲಕ್ಕುಂಡಿ ಉತ್ಸವ ಇಂದಿನಿಂದ

Last Updated 27 ಜನವರಿ 2018, 10:09 IST
ಅಕ್ಷರ ಗಾತ್ರ

ಗದಗ: ಐತಿಹಾಸಿಕ ಲಕ್ಕುಂಡಿ ಉತ್ಸವದ ಉದ್ಘಾಟನೆ ಜ. 27ರಂದು ಸಂಜೆ 6:30ಕ್ಕೆ ಗ್ರಾಮದ ದಾನ ಚಿಂತಾಮಣಿ ಅತ್ತಿಮಬ್ಬೆ ಮುಖ್ಯ ವೇದಿಕೆಯಲ್ಲಿ ನಡೆಯಲಿದೆ. ಈ ಉತ್ಸವ ಎರಡು ದಿನ ನಡೆಯಲಿದ್ದು, ಜನಪದ, ಸಂಗೀತ, ಸಾಹಿತ್ಯ ಕಲೆಗಳು ಅನಾವರಣಗೊಳ್ಳಲಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಉತ್ಸವ ಉದ್ಘಾಟಿಸುವರು. ಸಚಿವ ಎಚ್.ಕೆ.ಪಾಟೀಲ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು.

ಜ.27 ರಂದು ಬೆಳಿಗ್ಗೆ 10ಕ್ಕೆ ‘ಲಕ್ಕುಂಡಿ ಇತಿಹಾಸ ಮತ್ತು ಸಂಸ್ಕೃತಿ’ ಕುರಿತು ವಿಚಾರಗೋಷ್ಠಿಯು ಅಜಗಣ್ಣ- ಮುಕ್ತಾಯಕ್ಕ ಸಮಾನಾಂತರ ವೇದಿಕೆಯಲ್ಲಿ ನಡೆಯಲಿದೆ. ಶಾಸಕ ಬಿ.ಆರ್.ಯಾವಗಲ್ ಅಧ್ಯಕ್ಷತೆ ವಹಿಸುವರು. ಮೈಸೂರಿನ ಜೆ.ಎಸ್.ಎಸ್. ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಆಶಯ ನುಡಿಗಳನ್ನಾಡಲಿದ್ದಾರೆ.

ಮಧ್ಯಾಹ್ನ 12ಕ್ಕೆ ಎರಡನೇ ಗೋಷ್ಠಿ ನಡೆಯಲಿದೆ. ಇತಿಹಾಸ ತಜ್ಞ ಡಾ.ಕೃಷ್ಣ ಕೋಲಾರ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕ ಡಾ.ಸಿ.ಮಹಾದೇವ ಅವರು, ಧಾರ್ಮಿಕ ಪರಂಪರೆ ಮತ್ತು ಪಂಥಗಳು ಕುರಿತು ಹಾಗೂ ಇತಿಹಾಸ ತಜ್ಞ ಡಾ.ಶೀಲಾಕಾಂತ ಪತ್ತಾರ ಅವರು, ದೇವಾಲಯ ವಾಸ್ತು ಮತ್ತು ಮೂರ್ತಿ ಶಿಲ್ಪಕಲೆ ಕುರಿತು, ಶಾಸನ ತಜ್ಞೆ ಹನುಮಾಕ್ಷಿ ಗೋಗಿ ಅವರು ‘ಶಾಸನಗಳು ಮತ್ತು ಸ್ಮಾರಕಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಉತ್ಸವದ ಅಂಗವಾಗಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುವುದು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಶಿಲ್ಪಕಲಾ ಹಾಗೂ ಚಿತ್ರಕಲಾ ಶಿಬಿರಗಳ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಫಲಪುಷ್ಪ ಪ್ರದರ್ಶನದ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಲಕ್ಕುಂಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜಾನಪದ ಕಲಾವಾಹಿನಿ ಮೆರವಣಿಗೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಚಾಲನೆ ನೀಡಲಿದ್ದಾರೆ. ಶಾಸಕ ಜಿ.ಎಸ್.ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ: ಅಜಗಣ್ಣ ಮುಕ್ತಾಯಕ್ಕ ಸಮಾನಾಂತರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಚಂದ್ರಕಾಂತ ಇನಾಮದಾರ ಅವರಿಂದ ಸುಗಮ ಸಂಗೀತ ಅಕ್ಷತಾ ಹಿರೇಮಠ ಅವರಿಂದ ವಚನ ಸಂಗೀತ, ವೀಣಾ ಎನ್. ಶಿರೋಳ, ನಾಗಪ್ಪ ಶಿರೋಳ ಅವರಿಂದ ಸುಗಮ ಸಂಗೀತ, ಡಿ.ಎಚ್.ಅಣ್ಣಿಗೇರಿ ಅವರಿಂದ ಶಾಸ್ತ್ರೀಯ ಸಂಗೀತ, ಸೋಮಶೇಖರ ದೊಡ್ಡಮನಿ, ಸಂಗೀತಾ ಬಸಯ್ಯ ಕುಲಕರ್ಣಿ ಅವರಿಂದ ಸುಗಮ ಸಂಗೀತ, ಈರಪ್ಪ ಸಂಗಪ್ಪ ಒಜಗನವರ ಅವರಿಂದ ಗೀಗೀ ಪದ, ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯವರಿಂದ ಸಮೂಹ ನೃತ್ಯ, ಹನುಮಂತ ಮೇಟಿ, ಶಿವಾನಂದ ಶಾಸ್ತ್ರಿ ಹನುಮನಾಳ ಅವರಿಂದ ಸುಗಮ ಸಂಗೀತ, ಜೆ.ಜೆ. ಪ್ರಾಥಮಿಕ ಶಾಲೆಯವರಿಂದ ಸಮೂಹ ನೃತ್ಯ, ಮಂಜುನಾಥ ಮುರ್ಲಾಪುರ ಅವರಿಂದ ವಚನ ಸಂಗೀತ, ಪೂಜಾ ಬೇವೂರ ಅವರಿಂದ ಸುಗಮ ಸಂಗೀತ, ಸಂದೀಪ ಹೆದ್ದೂರಿ ಅವರಿಂದ ವಚನ ಸಂಗೀತ, ವಿ.ಎಂ.ಪಟ್ಟದಕಲ್ಲ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಮೆರವಣಿಗೆಯಲ್ಲಿ ಕಲಾ ತಂಡಗಳು: ವೀರಭದ್ರೇಶ್ವರ ಜಾನಪದ ಕಲಾ ತಂಡದಿಂದ ಕೀಲು ಕುದುರೆ, ಬೀರಲಿಂಗೇಶ್ವರ ಜಗ್ಗಲಿಗೆ ಮೇಳದವರಿಂದ ಜಗ್ಗಲಿಗೆ, ಬಸವೇಶ್ವರ ಸೇವಾ ಸಮಿತಿ ಕರಡಿ ಮಜಲು ತಂಡದಿಂದ ಕರಡಿ ಮಜಲು, ಶಿವರುದ್ರ ಶಿವಯೋಗಿ ಯುವಕ ಮಂಡಳ ತಂಡದಿಂದ ಕರಡಿ ಮಜಲು, ಮಲಪ್ರಭಾ ಸಾಂಸ್ಕೃತಿಕ ಕಲಾ ಸಂಘದಿಂದ ಡೊಳ್ಳು ಕುಣಿತ, ಸಿದ್ಧಲಿಂಗೇಶ್ವರ ಕರಡಿ ಮಜಲು ಕಲಾ ಸಂಘದಿಂದ ಕರಡಿ ಮಜಲು, ಚಕ್ರ ಮಹಿಳಾ ಡೊಳ್ಳು ಕುಣಿತ ತಂಡದಿಂದ ಮಹಿಳಾ ಡೊಳ್ಳು ಕುಣಿತ, ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಕಲಾ ಸಂಸ್ಥೆಯವರಿಂದ ಚಾಂಜ್ ಮೇಳ, ಅನ್ನದಾನೇಶ್ವರ ಸಂಗೀತ ಪಾಠ ಶಾಲೆಯವರಿಂದ ಕರಡಿ ಮಜಲು, ರಾಜರಾಜೇಶ್ವರಿ ಡೊಳ್ಳಿನ ಮೇಳದವರಿಂದ ಮಹಿಳಾ ಡೊಳ್ಳು ಕುಣಿತ ಸೇರಿದಂತೆ 25ಕ್ಕೂ ಹೆಚ್ಚು ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ

ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 4ಕ್ಕೆ ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶುಕರಸಾಬ್ ಮುಲ್ಲಾ ಅವರಿಂದ ಹಿಂದೂಸ್ತಾನಿ ಸಂಗೀತ, ಪ್ರೀತಿ ಹಡಗಲಿ ಅವರಿಂದ ಯೋಗಾಸನ, ಅನುಸೂಯಾ ಭೂಮಣ್ಣವರ ಅವರಿಂದ ಸೋಬಾನ ಪದ, ಗುರುಬಸವ ಕಲಾ ತಂಡದವರಿಂದ ಗೀಗೀ ಪದ, ಶಾಂತಲಾ ಹಂಚಿನಾಳ ಅವರಿಂದ ವಚನ ಸಂಗೀತ, ಮಲ್ಲಿಕಾರ್ಜುನ ವಿವಿದೋದ್ದೇಶಗಳ ಕಲಾಭಿವೃದ್ಧಿ ಸಂಗದವರಿಂದ ಕೋಲಾಟ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯವರಿಂದ ಸಮೂಹ ನೃತ್ಯ ನಡೆಯಲಿದೆ.

ಇದಲ್ಲದೇ ಮಾಲಿಂಗಪ್ಪ ಬಿನ್ನಾಳ ತಂಡದಿಂದ ಏಕತಾರಿ ಪದ, ಮಲ್ಲಿಕಾರ್ಜುನ ಯುವಕ ಮಂಡಳದವರಿಂದ ತತ್ವಪದ, ರಾಜೀವ ಹಿರೇಮಠ ಅವರಿಂದ ಸಿತಾರ ವಾದನ, ಪ್ರಭಾ ಹಿರೇಮಠ ಅವರಿಂದ ಸುಗಮ ಸಂಗೀತ, ಪಾರ್ವತಿ ಮಾಳೆಕಪ್ಪ ಮಠ, ಸಿದ್ಧು ಮೋಟೆ ತಂಡದಿಂದ ಡೊಳ್ಳಿನ ಪದ, ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಮೂಹ ನೃತ್ಯ, ಅನಿತಾ ಕುಲಕರ್ಣಿ ಅವರಿಂದ ಸಿತಾರ ವಾದನ, ವಿಶ್ರೂತ್ ಸೊರಬ ಅವರಿಂದ ನೃತ್ಯ, ರಾಜಗುರು ಕಲಕೇರಿ ಅವರಿಂದ ಸುಗಮ ಸಂಗೀತ, ಸುಧಾರಾಣಿ ಹೆಗಡಿ ಅವರಿಂದ ಭರತನಾಟ್ಯ, ಬೀಟ್ ಗುರೂಸ್ ತಂಡದವರಿಂದ ವಾದ್ಯ ಸಂಗೀತ, ಇಂದುಮತಿ ಸಾಲಿಮಠ ಅವರಿಂದ ನಗೆ ಹಬ್ಬ, ಸಂಗೀತಾ ರವೀಂದ್ರನಾಥ ತಂಡದಿಂದ ಚಿತ್ರಗೀತೆಗಳು, ಸರಿಗಮಪ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT