ಶಿರಸಿಯಲ್ಲಿ ಬೆಂಕಿ ಅನಾಹುತ: ₹15 ಲಕ್ಷಕ್ಕೂ ಅಧಿಕ ನಷ್ಟ

7

ಶಿರಸಿಯಲ್ಲಿ ಬೆಂಕಿ ಅನಾಹುತ: ₹15 ಲಕ್ಷಕ್ಕೂ ಅಧಿಕ ನಷ್ಟ

Published:
Updated:
ಶಿರಸಿಯಲ್ಲಿ ಬೆಂಕಿ ಅನಾಹುತ: ₹15 ಲಕ್ಷಕ್ಕೂ ಅಧಿಕ ನಷ್ಟ

ಶಿರಸಿ: ಇಲ್ಲಿನ ಟಿ.ಎಸ್.ಎಸ್ ಹತ್ತಿರ ಇರುವ ರಾಘವೇಂದ್ರ ಸ್ವಾಮಿ ಟ್ರೇಡರ್ಸ್, ಅಡಿಕೆ ವಕಾರಿಯಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಅಡಿಕೆ ಚೀಲಗಳು ಬೆಂಕಿಗೆ ಆಹುತಿಯಾಗಿವೆ.

₹15 ಲಕ್ಷಕ್ಕೂ ಅಧಿಕ ಮಾಲು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ವಿವೇಕ ಪೈ ಅವರಿಗೆ ಸೇರಿದ ವಕಾರಿ ಇದಾಗಿದೆ. ವಿದ್ಯುತ್ ಶಾಟ್೯ ಸರ್ಕೀಟ್‌ನಿಂದ ಅನಾಹುತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಟ್ರಕ್‌–ಬೈಕ್‌ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸಾವು

ಶಿರಸಿ: ತಾಲ್ಲೂಕಿನ ಸಂಪಖಂಡದ ಸಮೀಪ ಭಾನುವಾರ ಬೆಳಿಗ್ಗೆ ಬೈಕ್ ಹಾಗೂ ಟ್ರಕ್ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೈಕ್ ಸವಾರ ಕುಮಟಾದ ಅಬು ಅಹ್ಮದ್ ಬಂಡಿ ಮೃತಪಟ್ಟವರು. ಹಿಂಬದಿ ಸವಾರ ಸಲೀಂ ಅಬುಬುಕರ್ ಗಂಭೀರ ಗಾಯಗೊಂಡಿದ್ದಾರೆ.

ಅವರು ಕುಮಟಾದಿಂದ ಶಿರಸಿಗೆ ಬರುತ್ತಿರುವಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry