‘ದೇಶಭಕ್ತಿ ಸದಾ ನಮ್ಮಲ್ಲಿರಬೇಕು’

7

‘ದೇಶಭಕ್ತಿ ಸದಾ ನಮ್ಮಲ್ಲಿರಬೇಕು’

Published:
Updated:

ಕಾರ್ಕಳ: ದೇಶಭಕ್ತಿ ಎಂಬುದು ಪ್ರತಿಯೊಬ್ಬ ನಾಗರಿಕನ ಮನಸ್ಸಿನಿಂದ ಹುಟ್ಟಿ ಪ್ರವಹಿಸಬೇಕು ಎಂದು ನಿವೃತ್ತ ಶಾರ್ಟ್‌ಸರ್ವೀಸ್ ಕಮಿಷಂಡ್ ಮೆಡಿ ಕಲ್ ಆಫೀಸರ್ ಡಾ.ಕೆ. ನಿತ್ಯಾನಂದ ಶೆಟ್ಟಿ ಹೇಳಿದರು.

ತಾಲ್ಲೂಕಿನ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಯೋ ಜಿಸಿದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋ ಹಣವನ್ನು ನೆರವೇರಿಸಿ ಮಾತನಾಡಿದ ಅವರು, ‘ಈ ಸ್ವತಂತ್ರ ದೇಶ ನಿರ್ಮಾಣಕ್ಕೆ ಹಲವರ ತ್ಯಾಗ ಬಲಿದಾನಗಳೇ ಕಾರಣ ಎಂಬುದನ್ನು ನಾವು ಎಂದಿಗೂ ಮರೆಯಬಾರದು. ಯುವ ಪೀಳಿಗೆ ದೇಶದ ಏಳಿಗೆಯನ್ನೇ ಬಯಸಬೇಕು. ಭಾರತದಲ್ಲಿರುವ ಯುವಸಂಪತ್ತು ಇನ್ಯಾವುದೇ ದೇಶದಲ್ಲೂ ಕಾಣಸಿಗದು’ ಎಂದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್, ರಿಜಿಸ್ಟ್ರಾರ್ ಪ್ರೊ.ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.

ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿನ ಎನ್.ಸಿ.ಸಿ ಘಟಕ ಹಾಗೂ ನಿಟ್ಟೆ ಸಮೂಹ ಸಂಸ್ಥೆಗಳ ಭದ್ರತಾ ಸಿಬ್ಬಂದಿಯ ಪಥಸಂಚಲನ ವಿಶೇಷ ಆಕರ್ಷಣೆಯಾಗಿತ್ತು. ಎನ್.ಸಿ.ಸಿ ಅಧಿಕರಿ ಎನ್.ಅರವಿಂದ ಕುಮಾರ್ ನಿರೂಪಿಸಿದರು.

ನಂತರ ನಡೆದ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಶಿಕ್ಷಕ- ಶಿಕ್ಷಕೇ ತರರ ಕುಟುಂಬದ ಸ್ನೇಹ ಕೂಟವನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry