ಕಾಸ್‌ಗಂಜ್‌ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು -ಗವರ್ನರ್ ರಾಮ್‌ ನಾಯ್ಕ್‌

7

ಕಾಸ್‌ಗಂಜ್‌ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು -ಗವರ್ನರ್ ರಾಮ್‌ ನಾಯ್ಕ್‌

Published:
Updated:
ಕಾಸ್‌ಗಂಜ್‌ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು -ಗವರ್ನರ್ ರಾಮ್‌ ನಾಯ್ಕ್‌

ಕಾಸ್‌ಗಂಜ್‌, ಉತ್ತರ ಪ್ರದೇಶ: ನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಹಿಂಸಾಚಾರ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಗವರ್ನರ್ ರಾಮ್‌ ನಾಯ್ಕ್‌ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ 9–10 ತಿಂಗಳಲ್ಲಿ ಈ ರೀತಿಯ ಹಿಂಸಾಚಾರ ಘಟನೆ ಸಂಭವಿಸಿರುವುದು ಇದೇ ಮೊದಲು. ಇದೊಂದು ‘ಆವಮಾನಕರ’ ಸಂಗತಿ ಎಂದು ಗವರ್ನರ್ ಬಣ್ಣಿಸಿದ್ದಾರೆ.

ಮಥುರಾ–ಬರೇಲಿ ಹೆದ್ದಾರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಬೈಕ್‌ ರ‍್ಯಾಲಿಯಲ್ಲಿ ಎರಡು ಕೋಮಿನ ಗುಂಪುಗಳ ನಡುವೆ ಜಟಾಪಟಿ ನಡೆದಿದ್ದು, ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.

ಗಲಭೆಯಲ್ಲಿ ಒಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ 112 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರಕ್ಕೆ ಸಲಹೆ ನೀಡಿದ್ದರು.

ಇದನ್ನೂ ಓದಿ...ಕಾಸ್‌ಗಂಜ್‌ ಹಿಂಸಾಚಾರ: ಇಂಟರ್‌ನೆಟ್‌ ಸೇವೆ ಸ್ಥಗಿತ, ನಿಷೇಧಾಜ್ಞೆ ಜಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry