ಇಂತಹ ಸ್ವಾಮಿಗಳು ಬೇಕು

7

ಇಂತಹ ಸ್ವಾಮಿಗಳು ಬೇಕು

Published:
Updated:

‘ಕೇಂದ್ರ ಸರ್ಕಾರ ನಮ್ಮನ್ನು ಸಂಪರ್ಕಿಸದೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ. ಗುರುತಿಸಿದ್ದಕ್ಕೆ ಅನಂತ ಧನ್ಯವಾದ. ಸಮಾಜದಲ್ಲಿ ಅಸಾಧಾರಣ ಸೇವೆಗೈದ ಸಾಧಕರಿದ್ದಾರೆ. ಅಂತಹವರಿಗೆ ಇದನ್ನು ನೀಡಿದರೆ ಒಳ್ಳೆಯದು. ನಮಗೆ ಇದರ ಅವಶ್ಯಕತೆಯಿಲ್ಲ’ ಎಂದು ಸಿದ್ಧೇಶ್ವರ ಸ್ವಾಮೀಜಿ ಹೇಳಿರುವ ಮಾತಿನಿಂದ ನಮಗೆ ಅವರ ಸರಳತೆ, ನೇರ ನಿಲುವು, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ರೀತಿ ನೀತಿಗಳು ತಿಳಿಯುತ್ತವೆ.

ಇತ್ತೀಚೆಗೆ ಜಾತಿ ರಾಜಕಾರಣ ಮಾಡಿ, ಜಾತಿಗಳನ್ನು ವಿಭಜಿಸಿ, ಕೋಮು ಸೌಹಾರ್ದಕ್ಕೆ ದಕ್ಕೆ ತರುವಂಥ ಮತ್ತು ಪ್ರಶಸ್ತಿಗಳಿಗೆ ಹಂಬಲಿಸುವ ಕಪಟ ಕಾವಿಧಾರಿಗಳ  ಮಧ್ಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ನಿಲುವು ಅನುಕರಣೀಯ. ಅವರಿಗೆ ಸಾವಿರ ಶರಣು.

ಎಲ್.ಪಿ.ಕುಲಕರ್ಣಿ, ಬಾದಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry