‘ಸರ್ಕಾರಿ ಶಾಲೆ ಮಕ್ಕಳು ಎಂಬ ಕೀಳರಿಮೆ ಬೇಡ’

7

‘ಸರ್ಕಾರಿ ಶಾಲೆ ಮಕ್ಕಳು ಎಂಬ ಕೀಳರಿಮೆ ಬೇಡ’

Published:
Updated:

ಹೊಸನಗರ: ಸರ್ಕಾರಿ ಶಾಲೆಯ ಮಕ್ಕಳಲ್ಲಿ ಕೇಳರಿಮೆ ಬೇಡ. ಹಳ್ಳಿಯಲ್ಲಿಯೇ ಅತ್ಯಾಧುನಿಕ ಶಿಕ್ಷಣ ನೀಡುವ ಪ್ರಭಲ ಸಂವಹನ ಮಾಧ್ಯಮ ಬಳಸಿಕೊಳ್ಳುವಂತೆ ಮಾಜಿ ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು.

ತಾಲ್ಲೂಕಿನ ಯಡೂರು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್.ಸಿ.ಹಿರಿಯಣ್ಣ ಗೌಡ ರಂಗಮಂದಿರದಲ್ಲಿ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಕಲಿಕೆಯ ಮಟ್ಟ ಗಣನೀಯವಾಗಿ ಏರುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರು ಈ ಭಾಗದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಒತ್ತು ನೀಡಿದ್ದ, ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ದಿವಂಗತ ಎಚ್.ಸಿ.ಹಿರಿಯಣ್ಣ ಗೌಡ ಅವರ ಸೇವೆಯನ್ನು ಸ್ಮರಿಸಿದರು. ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಚ್.ಜಿ.ಶಂಕರಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸ: ಬೆಂಗಳೂರಿನ ರಣರಾಗಿಣಿ ಸಮಿತಿ ಸಂಚಾಲಕಿ ಭವ್ಯ ಗೌಡ ಹಾಗೂ ಉದ್ಯಮಿ ಎಂ.ಚಿದಂಬರ ನಾಯಕ್ ಉಪನ್ಯಾಸ ನೀಡಿದರು.

ಸನ್ಮಾನ: ಪ್ರಾಚ್ಯ ವಸ್ತು ಸಂಗ್ರಹಕಾರ ಮಹ್ಮದ್ ಮತ್ತಿಗ, ನಿವೃತ್ತ ಅರಣ್ಯಾಧಿಕಾರಿ ವೈ.ಕೆ.ಶ್ರೀಧರ ಹೆಗಡೆ, ಕಿರುತೆರೆ ನಿರ್ದೇಶಕ ರವಿ ಅಂಬಳಿಕೆ, ಹಾಗೂ ಹಿರಿಯ ಪತ್ರಕರ್ತ ಶಿವಕುಮಾರ ಜೋಯ್ಸ್ ಇವರನ್ನು ಈ ವೇಳೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಸದಸ್ಯೆ ಶೋಭಾ ಮಂಜುನಾಥ್, ಸುಳಗೋಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಧರ, ಉಪಾಧ್ಯಕ್ಷೆ ಕಲಾವತಿ ಧರ್ಮರಾಜ್, ಯಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತೀಶ, ಉಪಾಧ್ಯಕ್ಷೆ ವೀಣಾ ಹೆಗಡೆ, ಸದಸ್ಯರು ದಿನೇಶ, ಸುಧೀರ ಕುಮಾರ, ಅನಿತಾ, ಭಾಸ್ಕರ ಜೋಯ್ಸ್, ಎಚ್.ಆರ್.ಮೂರ್ತಿ ಗೌಡ, ಅಪ್ಪು ಆಚಾರ್, ಮುಖ್ಯ ಶಿಕ್ಷಕಿ ಉಭಯ ಭಾರತಿ, ಇದ್ದರು. ಎ.ಜಿ.ಸದಾನಂದ ಸ್ವಾಗತಿಸಿದರು. ಅಚ್ಚುತ ಪೈ

ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry