4

ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರದಲ್ಲಿ ರಣವೀರ್‌ ಸಿಂಗ್‌ ಅಭಿನಯ: ಮೆಚ್ಚುಗೆ ಪತ್ರ ಬರೆದ ಬಿಗ್‌ಬಿ

Published:
Updated:
ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರದಲ್ಲಿ ರಣವೀರ್‌ ಸಿಂಗ್‌ ಅಭಿನಯ: ಮೆಚ್ಚುಗೆ ಪತ್ರ ಬರೆದ ಬಿಗ್‌ಬಿ

ಮುಂಬೈ: ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರದಲ್ಲಿ ರಣವೀರ್‌ ಸಿಂಗ್‌ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಿತ್ರ ವೀಕ್ಷಿಸಿದ ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರು ರಣವೀರ್‌ ಸಿಂಗ್‌ಗೆ ಪತ್ರ ಮುಖೇನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಿ ಕಳುಹಿಸಿರುವ ಪತ್ರ ಹಾಗೂ ಪುಷ್ಪಗುಚ್ಛದ ಚಿತ್ರ ತೆಗೆದು ರಣವೀರ್‌ ಸಿಂಗ್‌ ಟ್ವೀಟ್‌ ಮಾಡಿ, ‘ನನಗೆ ನನ್ನ ಪ್ರಶಸ್ತಿ ಲಭಿಸಿತು’ ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ₹110 ಕೋಟಿ ಗಳಿಕೆ ಮಾಡಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್‌’ ಚಿತ್ರ, ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಿನಿಮಾದಲ್ಲಿ ಖಿಲ್ಜಿ ಗೆಲುವಿನ ಸಂಭ್ರಮದಲ್ಲಿ ಹಾಡುವ ‘ಖಲಿಬಲಿ’ ಗೀತೆ ಸೋಮವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಈ ಗೀತೆಯನ್ನು ಈವರೆಗೂ 49 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry