ರಾಜಕೀಯಮುಕ್ತ ಆಗಲಿ

7

ರಾಜಕೀಯಮುಕ್ತ ಆಗಲಿ

Published:
Updated:

ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ. ಆದರೆ, ಅವರ ಹುಟ್ಟು ಮತ್ತು ಸಾವಿನ ದಿನಗಳು ರಾಜಕೀಯ ಸಮಾವೇಶಗಳಾಗಿ ಮಾರ್ಪಡುತ್ತಿರುವುದು ಅತ್ಯಂತ ನೋವಿನ ಸಂಗತಿ.

ಗೌರಿ ಅವರ ಸರಳ ಬದುಕು, ಬರಹ, ಪತ್ರಿಕೋದ್ಯಮ, ಅವರ ನಡೆ–ನುಡಿಗಳು ರಾಜ್ಯದ ಹಲವಾರು ಜನರಿಗೆ ಮಾದರಿಯಾಗಿವೆ. ಅವರ ಜನ್ಮದಿನದಂದು, ಗೌರಿಯವರು ನಡೆದು ಬಂದ ದಾರಿ, ಅವರು ಬದುಕು ಕಟ್ಟಿಕೊಂಡ ರೀತಿ, ಅವರ ತ್ಯಾಗ ಮತ್ತು ಸಾಹಸಗಳ ಕುರಿತು ಮಾತನಾಡುವುದನ್ನು ಬಿಟ್ಟು, ಮೋದಿ ಮತ್ತು ಬಿಜೆಪಿ ವಿರುದ್ಧ ಮಾತನಾಡಿದ್ದು ನೋಡಿದರೆ, ಅದು ಯಾವುದೊ ಒಂದು ರಾಜಕೀಯ ಉದ್ದೇಶದ ಕಾರ್ಯಕ್ರಮ ಎನಿಸುವಂತಿತ್ತು. ಕಾರ್ಯಕ್ರಮಕ್ಕೆ ಬಂದ ಸಾಕಷ್ಟು ಅಭಿಮಾನಿಗಳಿಗೆ, ಮೆವಾನಿ ಮತ್ತು ಪ್ರಕಾಶ್ ಅವರ ಮಾತುಗಳನ್ನು ಕೇಳಿ ‘ನಾವು ರಾಜಕೀಯ ಸಮಾವೇಶಕ್ಕೆ ಬಂದಿದ್ದೇವೆಯೋ’ ಎಂಬ ಭಾವನೆ ಮೂಡಿತ್ತು. ಮುಂದಿನ ದಿನಗಳಲ್ಲಾದರೂ ಗೌರಿ ಕುರಿತ ಕಾರ್ಯಕ್ರಮಗಳು ರಾಜಕೀಯದಿಂದ ಮುಕ್ತವಾಗಿರಲಿ.

ಸಿದ್ದನಗೌಡ ರಾ. ಬಿರಾದಾರ, ಶಿರಕನಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry