ಉದ್ಯಮಿ ವಿರುದ್ಧ ನಟಿ ಜೀನತ್‌ ಅಮಾನ್‌ ದೂರು

7

ಉದ್ಯಮಿ ವಿರುದ್ಧ ನಟಿ ಜೀನತ್‌ ಅಮಾನ್‌ ದೂರು

Published:
Updated:
ಉದ್ಯಮಿ ವಿರುದ್ಧ ನಟಿ ಜೀನತ್‌ ಅಮಾನ್‌ ದೂರು

ನವದೆಹಲಿ: ಬಾಲಿವುಡ್‌ನ ಹಿರಿಯ ನಟಿ ಜೀನತ್‌ ಅಮಾನ್‌ ಅವರು ಮುಂಬೈನ ಉದ್ಯಮಿಯೊಬ್ಬರ ವಿರುದ್ಧ ಜುಹೂ ಪೊಲೀಸ್‌ ಠಾಣೆಯಲ್ಲಿ  ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ತನಿಖೆ ನಡೆಯುತ್ತಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಎಎನ್‌ಐ ವರದಿ ಮಾಡಿದೆ. ಭಾರತೀಯ ದಂಡಸಂಹಿತೆ 304ಡಿ(ಹಿಂಬಾಲಿಸುವುದು )ಮತ್ತು 509(ಮಹಿಳೆಯರನ್ನು ಅವಮಾನಿಸುವುದು)ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಉದ್ಯಮಿ ಮತ್ತು ಜೀನತ್‌ ಅವರು ಬಹಳ ವರ್ಷಗಳಿಂದ ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ನಡುವೆ ಕೆಲವು ವಿಷಯಗಳಲ್ಲಿ ಮನಸ್ತಾಪವಾಗಿದೆ. ಆನಂತರ ಉದ್ಯಮಿ ಜೊತೆ ಜೀನತ್ ಮಾತುಕತೆ ನಿಲ್ಲಿಸಿದ್ದರು. ಆದರೆ, ಆತ ಕರೆ ಮಾಡುವುದು, ಹಿಂಬಾಲಿಸುವುದು ಮುಂದುವರಿಸಿದ್ದಾನೆ. ಈ ಕಾರಣದಿಂದ ದೂರು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry