ಎಂ.ಪಿ ಪ್ರಕಾಶ್ ಸ್ಮಾರಕ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ನಿಕ್ಷೇಪ್‌

7

ಎಂ.ಪಿ ಪ್ರಕಾಶ್ ಸ್ಮಾರಕ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ನಿಕ್ಷೇಪ್‌

Published:
Updated:

ಬೆಂಗಳೂರು: ಐದನೇ ಶ್ರೇಯಾಂಕದ ಬಿ.ಆರ್‌.ನಿಕ್ಷೇಪ್‌ ಇಲ್ಲಿ ನಡೆಯುತ್ತಿರುವ ಕೆಟಿಪಿಪಿಎ ವತಿಯ ಎಂ.ಪಿ ಪ್ರಕಾಶ್ ಸ್ಮಾರಕ ಟೆನಿಸ್ ಟೂರ್ನಿಯಲ್ಲಿ ಬುಧವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಿಕ್ಷೇಪ್‌ 6–1, 6–2ರಲ್ಲಿ ಹರ್ಷವರ್ಧನ್ ಅವರನ್ನು ಮಣಿಸಿದರು. ಸರಾನಾ ಕಾಲೇಜಿನ ವಿದ್ಯಾರ್ಥಿ ನಿಕ್ಷೇಪ್‌ ಎರಡೂ ಸೆಟ್‌ಗಳಲ್ಲಿ ಪ್ರಾಬಲ್ಯ ಮೆರೆದರು. ಸೆಮಿಫೈನಲ್‌ ಪೈಪೋಟಿಯಲ್ಲಿ ಅವರು ಅಗ್ರಶ್ರೇಯಾಂಕದ ತಮಿಳುನಾಡಿನ ಪೃಥ್ವಿ ಶೇಖರ್ ಎದುರು ಆಡಲಿದ್ದಾರೆ.

ಇನ್ನೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೃಥ್ವಿ 6–2, 6–0ರಲ್ಲಿ ವಿ.ವಿಜ್ಞೇಶ್ ಅವರ ಎದುರು ಗೆದ್ದಿದ್ದಾರೆ. ಶ್ರೇಯಾಂಕ ರಹಿತ ಆಟಗಾರರಾದ ನಿಖಿತ್ ರೆಡ್ಡಿ ಮತ್ತು ಗುಹಾನ್‌ ರಾಜನ್ ಕೂಡ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ನಿಖಿತ್‌ 6–3, 6–4ರಲ್ಲಿ ಜೂಡ್ ರೇಮಂಡ್ ಮೇಲೂ, ಗುಹಾನ್‌ 6–3, 4–6, 6–4ರಲ್ಲಿ ಕೆ.ಎಸ್‌.ಧೀರಜ್ ವಿರುದ್ಧವೂ ಗೆಲುವು ದಾಖಲಿಸಿದ್ದಾರೆ.

ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಶಾಲ್ ಅನ್ವರ್‌ ಮತ್ತು ಅಚಿಂತ್ ಭಗತ್‌ ಜೋಡಿ 2–6, 7–6, 12–10ರಲ್ಲಿ ರಾಹುಲ್ ಶೇಖರ್ ಹಾಗೂ ತತಗತ್‌ ಅವರನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ನಿಕ್ಷೇಪ್‌ ಮತ್ತು ರಿಷಿ ರೆಡ್ಡಿ ಜೋಡಿ 6–3, 6–3ರಲ್ಲಿ ಕಿರಣ್‌ ಅರುಣಾಚಲಮ್‌ ಹಾಗೂ ದೀಪಕ್ ವಿರುದ್ಧ ಗೆದ್ದಿದೆ. 

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎಸ್‌.ಸೋಹಾ 6–1, 6–2ರಲ್ಲಿ ದೀಪ್ಸಿಕಾ ವಿರುದ್ಧವೂ, ಪ್ರತಿಭಾ ಪ್ರಸಾದ್ 6–0, 6–1ರಲ್ಲಿ ರಿತಿ ಅಗರವಾಲ್‌ ಮೇಲೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry