ಅಣ್ಣಾ ಹಜಾರೆ–ಉಪೇಂದ್ರ ಭೇಟಿ: ಚುನಾವಣೆ, ರಾಜಕೀಯ, ಸಮಾಜ ಸೇವೆಯ ಚರ್ಚೆ

7

ಅಣ್ಣಾ ಹಜಾರೆ–ಉಪೇಂದ್ರ ಭೇಟಿ: ಚುನಾವಣೆ, ರಾಜಕೀಯ, ಸಮಾಜ ಸೇವೆಯ ಚರ್ಚೆ

Published:
Updated:
ಅಣ್ಣಾ ಹಜಾರೆ–ಉಪೇಂದ್ರ ಭೇಟಿ: ಚುನಾವಣೆ, ರಾಜಕೀಯ, ಸಮಾಜ ಸೇವೆಯ ಚರ್ಚೆ

ಬೆಂಗಳೂರು: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸಮಾಜ ಸೇವೆಯ ಕುರಿತು ಕೆಪಿಜೆಪಿ ಮುಖಂಡ ಉಪೇಂದ್ರ ಅವರಿಗೆ ಸಲಹೆ ನೀಡಿದ್ದಾರೆ.

ಜ.31ರಂದು ಉಪೇಂದ್ರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದು, ಪ್ರಸ್ತುತ ರಾಜಕೀಯ, ಪಕ್ಷದ ಉದ್ದೇಶ, ಸಮಾಜ ಸೇವೆ ಕುರಿತು ಚರ್ಚಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೊವನ್ನು ಉಪೇಂದ್ರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಗ್ರಾಮವೊಂದು ಮಂದಿರ, ದೇಶವೊಂದು ಮಂದಿರ, ಜನತೆಯ ಸೇವೆಯೇ ದೇವರ ಆರಾಧನೆ...ನಿಮ್ಮ ಕಾರ್ಯ ಮುಂದುವರಿಸಿ..’ ಎಂದು ಅಣ್ಣಾ ಹಜಾರೆ ಬೆಂಬಲ ಸೂಚಿಸಿದ್ದಾರೆ.

‘ಸಂವಿಧಾನದಲ್ಲಿ ಇರುವುದು ವ್ಯಕ್ತಿಗೆ ಆದ್ಯತೆ ಇರುವುದು ಪಕ್ಷಕ್ಕಲ್ಲ...ಆದರೆ, ಚುನಾವಣೆ ಎಂದರೆ ಪಕ್ಷ ಮುಖ್ಯವಾಗಿ ಹೋಗಿದೆ. ಪಕ್ಷ ಮತ್ತು ಚಿಹ್ನೆ ಇಲ್ಲದೆ ಚುನಾವಣಾ ಆಯೋಗದಿಂದ ಅನುಮತಿ ದೊರೆಯುವುದಿಲ್ಲ...’ 

ಭ್ರಷ್ಟಾಚಾರಮುಕ್ತ, ಪ್ರಜೆಗಳ ಸರ್ಕಾರದ ಸಾಕಾರದ ಕುರಿತು ಚರ್ಚೆ ನಡೆದಿದೆ.

ಮಾರ್ಚ್ 23ರಂದು ದೆಹಲಿಯ ರಾಮ್ ಲೀಲಾ‌ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಘೋಷಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry