ಶನಿವಾರ, ಜೂನ್ 6, 2020
27 °C

ಹವಾಯಿ ಚಪ್ಪಲಿ ತೊಟ್ಟುಕೊಳ್ಳುವವರಿಗೂ ವಿಮಾನಯಾನ ಮಾಡಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹವಾಯಿ ಚಪ್ಪಲಿ ತೊಟ್ಟುಕೊಳ್ಳುವವರಿಗೂ ವಿಮಾನಯಾನ ಮಾಡಲು ಅವಕಾಶ

ನವದೆಹಲಿ: ಹವಾಯಿ ಚಪ್ಪಲಿ ತೊಟ್ಟುಕೊಳ್ಳುವವರಿಗೂ ವಿಮಾನಯಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಒಂದು ಗಂಟೆಯ ಪ್ರಯಾಣಕ್ಕೆ ₹2500 ಟಿಕೆಟ್ ಬೆಲೆಯಾದರೆ ಸಾಮಾನ್ಯ ಜನರೂ ವಿಮಾನಯಾನ ಮಾಡಬಹುದಾಗಿದೆ ಎಂದು ಬಜೆಟ್ ಭಾಷಣದಲ್ಲಿ ಸಚಿವರು ಹೇಳಿದ್ದಾರೆ.

ಮುಂಬರುವ 10- 15 ವರ್ಷಗಳೊಳಗೆ ಪ್ರತೀ ವರ್ಷ 100 ಕೋಟಿ ಜನರಿಗೆ ವಿಮಾನ ಪ್ರಯಾಣ ನಡೆಸಲು ಅನುಕೂಲವಾಗುವಂತೆ ವಿಮಾನ ನಿಲ್ದಾಣಗಳ ಸೌಕರ್ಯವನ್ನು ಅಭಿವೃದ್ದಿ ಪಡಿಸಲಾಗುವುದು.

ದೇಶದ ಸಣ್ಣ ನಗರಗಳಿಗೂ ವಿಮಾನಯಾನ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಉಡಾನ್ ಯೋಜನೆಗೆ ಉತ್ತೇಜನ ನೀಡಲಾಗಿದೆ. 56 ಹೊಸ ವಿಮಾನ ನಿಲ್ದಾಣಗಳು ಮತ್ತು 31 ಹೆಲಿಪ್ಯಾಡ್‌‍ಗಳು ಉಡಾನ್ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡಲಾಗುವುದು.ಈಗಾಗಲೇ 16 ವಿಮಾನ ನಿಲ್ದಾಣಗಳನ್ನು ಈ ಯೋಜನೆಯಡಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.