ಮಂಗಳವಾರ, ಡಿಸೆಂಬರ್ 10, 2019
20 °C

ಸೂಕಿ ಮನೆ ಮೇಲೆ ಬಾಂಬ್‌ ದಾಳಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸೂಕಿ ಮನೆ ಮೇಲೆ ಬಾಂಬ್‌ ದಾಳಿ

ಯಾಂಗೂನ್‌: ಇಲ್ಲಿನ ಸರೋವರದ ಪಕ್ಕದಲ್ಲಿರುವ, ಮ್ಯಾನ್ಮಾರ್‌ ನಾಯಕಿ ಆಂಗ್‌ಸಾನ್‌ ಸೂಕಿ ಅವರ ಮನೆಯ ಆವರಣಕ್ಕೆ ವ್ಯಕ್ತಿಯೊಬ್ಬ ಗುರುವಾರ ಪೆಟ್ರೋಲ್‌ ಬಾಂಬ್‌ ಎಸೆದಿದ್ದಾನೆ. ಇದರಿಂದ ಮನೆಗೆ ಸಣ್ಣಪುಟ್ಟ ಹಾನಿಯಾಗಿದೆ.

‘ಭದ್ರತಾ ಪಡೆಗಳು ದುಷ್ಕರ್ಮಿಯ ಶೋಧಕ್ಕೆ ಬಲೆ ಬೀಸಿವೆ’ ಎಂದು ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷದ ಅಧಿಕಾರಿ ಕೀ ಟೊ ಅವರು ಪಕ್ಷದ ಫೇಸ್‌ಬುಕ್‌ ಪುಟದಲ್ಲಿ ಬರೆದಿದ್ದಾರೆ. ರೋಹಿಂಗ್ಯಾ ಮುಸ್ಲಿಮರ ಮೇಲಿನ ದಾಳಿಗೆ ಜಾಗತಿಕವಾಗಿ ಸೂಕಿ ಟೀಕೆಗೆ ಒಳಗಾಗಿದ್ದರೂ ಸ್ವದೇಶದಲ್ಲಿ ಅವರಿಗೆ ಬೆಂಬಲ ಇರುವುದರಿಂದ ಈ ದಾಳಿ ಅಚ್ಚರಿಗೆ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)