ಮಲಯಾಳ ನಟಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

7

ಮಲಯಾಳ ನಟಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Published:
Updated:

ತಿರುವನಂತಪುರ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಲಯಾಳ ನಟಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದ ಆರೋಪಿಯನ್ನು ತ್ರಿಶೂರ್ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು– ತಿರುವನಂತಪುರ ನಡುವೆ ಸಂಚರಿಸುವ ಮಾವೇಲಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗುರುವಾರ ಮುಂಜಾನೆ ಆರೋಪಿ ದೌರ್ಜನ್ಯ ನಡೆಸಲು ಮುಂದಾಗಿದ್ದ.  ಬಂಧಿತನನ್ನು ತಮಿಳುನಾಡಿನ ಅಂಟೊಬೋಸೆ  ಎಂದು ಗುರುತಿಸಲಾಗಿದ್ದು, ಈತನನ್ನು ತ್ರಿಶೂರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಣ್ಣೂರಿನಿಂದ ಎ.ಸಿ ಬೋಗಿಯಲ್ಲಿ ಮೇಲಿನ ಬರ್ತ್‌ನಲ್ಲಿ  ನಟಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆಇದೆ. ‘ಎದುರಿನ ಬ‌ರ್ತ್‌ನಲ್ಲಿದ್ದ ಆರೋಪಿ ನನ್ನ ತುಟಿ ಮೇಲೆ ಕೈ ಹಾಕಿದ್ದ. ಇದರಿಂದ ಎಚ್ಚರಗೊಂಡು ಆತನ ಕೈಹಿಡಿದುಕೊಂಡೇ ಬೋಗಿಯಲ್ಲಿದ್ದ ಇತರರನ್ನು ಎಬ್ಬಿಸಲು ಮುಂದಾದೆ. ಕೂಗಿಕೊಂಡರೂ ಯಾರೂ ಸಹಾಯಕ್ಕೆ ಬರಲಿಲ್ಲ’ ಎಂದು ವಾಹಿನಿಗಳಿಗೆ ತಿಳಿಸಿದ್ದಾರೆ.

ಕೊನೆಗೆ ಇಬ್ಬರು ಪ್ರಯಾಣಿಕರು ಘಟನೆ  ಬಗ್ಗೆ ಟಿಕೆಟ್ ತಪಾಸಣಾ ಅಧಿಕಾರಿಗೆ (ಟಿ.ಸಿ) ಮಾಹಿತಿ ನೀಡಿದರು. ಆನಂತರ ಆರೋಪಿಯನ್ನು ಹಿಡಿದು ತ್ರಿಶೂರ್‌ನಲ್ಲಿ ಪೊಲೀಸರ ವಶಕ್ಕೆ ನೀಡಲಾಯಿತು.

ಬಾಲನಟಿಯಾಗಿದ್ದ ಈಕೆ ಮಲಯಾಳ ಹಾಗೂ ತಮಿಳಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕನ್ನಡದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ಶಿವರಾಜ್‌ ಕುಮಾರ್ ಜತೆ ನಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry