ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋಳಿಗಳಿಗೆ ವಿಶ್ವದಲ್ಲೆ ಪ್ರಬಲ ರೋಗನಿರೋಧಕ ಔಷಧ ನೀಡಿಕೆ; ಮನುಷ್ಯರಿಗೂ ಅಪಾಯ

Last Updated 12 ಫೆಬ್ರುವರಿ 2018, 20:49 IST
ಅಕ್ಷರ ಗಾತ್ರ

ಭಾರತದಲ್ಲಿ ಉತ್ಪಾದನೆಯಾಗುವ ಕೋಳಿಗಳಿಗೆ ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರಬಲ ರೋಗನಿರೋಧಕ ಔಷಧಗಳನ್ನು ನೀಡಲಾಗುತ್ತಿದೆ. ಇದು ಮನುಷ್ಯ ಸೇರಿದಂತೆ ಇತರ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.

ಕೋಳಿ ಸಾಕಾಣಿಕೆ ವೇಳೆ ಕೋಳಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ಮಾತ್ರ ಔಷಧ ನೀಡಬೇಕು. ಆದರೆ, ಅಗತ್ಯ ಪ್ರಮಾಣಕ್ಕಿತ ಹೆಚ್ಚಿನ ಔಷಧಗಳನ್ನು ಅನಾರೋಗ್ಯ ಕಾಣಿಸಿಕೊಳ್ಳುವ ಮೊದಲೇ ನೀಡಲಾಗುತ್ತಿದೆ.

ಭಾರತದಲ್ಲಿ ನೂರಾರು ಟನ್‌ಗಳಷ್ಟು ರೋಗನಿರೋಧಕ ಔಷಧಗಳನ್ನು ವೈದ್ಯರ ಶಿಫಾರಸು ಇಲ್ಲದೆಯೇ ಕೋಳಿಗಳಿಗೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಅನಾರೋಗ್ಯ ಕಾಣಿಸಿಕೊಂಡ ಕೋಳಿಗಳಿಗೆ ಅಂತಿಮ ಹಂತದಲ್ಲಿ/ಅತ್ಯಂತ ವಿರಳ ಸಂದರ್ಭಗಳಲ್ಲಿ ನೀಡಬೇಕಿರುವ ಔಷಧವನ್ನೂ ಮುಂಚಿತವಾಗಿ, ಅಗತ್ಯ ಇಲ್ಲದಿದ್ದರೂ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿ ಎಂದು ಹೇಳಿದೆ.

ಈ ಕುರಿತು ‘ದಿ ಗಾರ್ಡಿಯನ್‌’ ವರದಿ ಮಾಡಿದ್ದು, ಕೋಳಿಗಳಿಗೆ ನೀಡುವ ಔಷಧವು ವಿದೇಶಗಳಿಗೆ ರಫ್ತಾಗುವ ಕೋಳಿಗಳ ಮೂಲಕ ವಿಶ್ವದೆಲ್ಲೆಡೆ ಹರಡುತ್ತಿದೆ. ಇದು ವಿಶ್ವದಲ್ಲಿನ ಇತರ ಜೀವಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಗತ್ಯವಿಲ್ಲದ್ದರೂ ನೀಡಿರುವ ಔಷಧಗಳನ್ನು ತಿಂದು ಬೆಳೆದ ಕೋಳಿಗಳನ್ನು ಸೇವಿಸುವ ಮನುಷ್ಯರ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಇದರಿಂದ ಮನುಷ್ಯನಿಗೂ ಯಾವುದಾದರೂ ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ಸಾಮಾನ್ಯ ಔಷಧೋಪಚಾರಕ್ಕೂ ಸ್ಪಂದಿಸದ ಸ್ಥಿತಿ ಎದುರಾಗುತ್ತದೆ ಎಂದು ವಿವರಿಸಲಾಗಿದೆ.

</p><p>ಜೀವಿಯೊಂದಕ್ಕೆ ಸಾಮಾನ್ಯ ರೋಗ ನಿರೋಧಕ ಶಕ್ತಿ ಇರುತ್ತದೆ. ಅದೇ ರೀತಿ ಕೋಳಿಗಳಿಗೂ ರೋಗ ನಿರೋಧಕ ಶಕ್ತಿ ಇದೆ. ಇದನ್ನು ಪರಿಗಣಿಸದೆ, ತಜ್ಞ ವೈದ್ಯರ ಸಲಹೆ, ಸೂಚನೆ ಇಲ್ಲದೆಯೆ ಅಗತ್ಯವಿಲ್ಲದಿದ್ದರೂ ರೋಗನಿರೋಧಕಗಳನ್ನು ನೀಡಲಾಗುತ್ತಿದೆ.</p><p>ಅತಿ ಹೆಚ್ಚು ರೋಗನಿರೋಧಕ ಔಷಧೀಯ ಅಂಶಗಳಿಂದ ಕೂಡಿರುವ ಕೋಳಿಗಳ ಮಾಂಸವನ್ನು ಸೇವಿಸುವ ಮನುಷ್ಯರೂ ಯಾವುದೇ ಚಿಕಿತ್ಸೆಗೆ ಒಗ್ಗದ ಸ್ಥಿತಿ ಎದುರಾಗುತ್ತದೆ ಎಂದು ವಿವರಿಸಲಾಗಿದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT