‘ಸಾಹಿತ್ಯಕ್ಕೆ ಸವಾಲಾದ ಆಧುನಿಕ ತಂತ್ರಜ್ಞಾನ’

7

‘ಸಾಹಿತ್ಯಕ್ಕೆ ಸವಾಲಾದ ಆಧುನಿಕ ತಂತ್ರಜ್ಞಾನ’

Published:
Updated:

ಶಿಗ್ಗಾವಿ: ‘ಇಂದು ಸಾಹಿತ್ಯ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಸವಾಲಾಗಿದ್ದು, ಸೃಜನಾತ್ಮಕ, ಚಿಂತನಾಶೀಲ ಸಾಹಿತ್ಯ ರಚನೆಗೆ ಮುಂದಾಗಬೇಕಾಗಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಸಂಗನಬಸವ ಮಂಗಲ ಭವನದಲ್ಲಿ ಗುರುವಾರ ನಡೆದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬೇಕು. ಅಂತಹ ಸಾಹಿತ್ಯ ರಚನೆಯಲ್ಲಿ ಕಸಾಪ ನಿರತವಾಗಬೇಕು’ ಎಂದ ಅವರು, ‘ಸಂಸ್ಕೃತಿ ಅರ್ಥೈಸಿ ಕೊಳ್ಳಲಲು ಸಾಹಿತ್ಯ ಬೇಕು’ ಎಂದು ಹೇಳಿದರು.

ಬೆಳಗಾವಿ ಸಾಹಿತಿ ಡಾ.ಹಜರತಸಾಬ್‌ ತಿಮ್ಮಾಪುರ ಮಾತ ನಾಡಿ, ‘ಉತ್ತಮ ಸಾಹಿತ್ಯದಿಂದ ಮಾತ್ರ ಸುಂದರ ಸಮಾಜ, ನಾಡು ನಿರ್ಮಾಣ ವಾಗಲು ಸಾಧ್ಯವಿದೆ’ ಎಂದರು.

ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷ ಅಭಿನವಕುಮಾರ ಸ್ವಾಮೀಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಎಸ್‌.ಎನ್‌.ಮುಗಳಿ, ನಾಗಪ್ಪ ಬೆಂತೂರ, ಬಿಇಒ ಎಂ.ಎಚ್‌.ಪಾಟೀಲ ಇದ್ದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗೋಷ್ಠಿ–3: ಇದಕ್ಕೂ ಮುನ್ನ ನಡೆದ ಗೋಷ್ಠಿ–3 ರಲ್ಲಿ ‘ಮಹಿಳಾ ಮತ್ತು ಮಕ್ಕಳ’ ವಿಷಯದ ಕುರಿತು ಮಾತನಾಡಿದ ಸಾಹಿತಿ ಲಲಿತಾ ಹಿರೇಮಠ ಅವರು, ‘ಮಕ್ಕಳ ಜ್ಞಾನ ಶಕ್ತಿ ಹೆಚ್ಚಳಕ್ಕೆ ಆಧುನಿಕತೆ ಪ್ರಭಾವವೇ ಕಾರಣವಾಗಿದ್ದು, ಅವುಗಳನ್ನು ಸರಿಯಾಗಿ ಬಳಕೆ ಮಾಡಿ

ಕೊಂಡಲ್ಲಿ ಉತ್ತಮ ಬೆಳವಣಿಗೆಗೆ ಸಾಧ್ಯ’ ಎಂದರು.

ಗಿರಿಜಾ ಹೆಸರೂರ ‘ಮಹಿಳೆ ಮತ್ತು ಕೌಂಟುಂಬಿಕ ಸಮಸ್ಯೆಗಳು’, ಡಾ.ಸುಮಂಗಲಾ ಅತ್ತಿಗೇರಿ ‘ಮಹಿಳೆ ಮತ್ತು ಸಾಮಾಜಿಕ ಜವಾಬ್ದಾರಿಗಳು’, ಡಾ.ಲತಾ ನೀಡಗುಂದಿ ‘ಮಕ್ಕಳ ಲಾಲನೆ ಪಾಲನೆ’ ವಿಷಯದ ಕುರಿತು ಮಾತನಾಡಿದರು. ಎಪಿಎಂಸಿ ಸದಸ್ಯೆ ಪ್ರೇಮಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಲಿಂಗರಾಜ ದೇಟಿನ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry