ಸೋಮವಾರ, ಡಿಸೆಂಬರ್ 9, 2019
25 °C

ಎಲ್ಲರ ಬೆಂಬಲವೂ ಇತ್ತು, ನನ್ನನ್ನು ಮಾತ್ರ ಹೊಗಳುವುದು ಸ್ವಲ್ಪ ಸಂಕೋಚವನ್ನುಂಟು ಮಾಡುತ್ತಿದೆ: ರಾಹುಲ್ ದ್ರಾವಿಡ್

Published:
Updated:
ಎಲ್ಲರ ಬೆಂಬಲವೂ ಇತ್ತು, ನನ್ನನ್ನು ಮಾತ್ರ ಹೊಗಳುವುದು ಸ್ವಲ್ಪ ಸಂಕೋಚವನ್ನುಂಟು ಮಾಡುತ್ತಿದೆ: ರಾಹುಲ್ ದ್ರಾವಿಡ್

ನವದೆಹಲಿ: ನ್ಯೂಜಿಲೆಂಡ್‌ನಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಭಾರತ ತಂಡ ಸಂಭ್ರಮಿಸುತ್ತಿರುವ ವೇಳೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪರಿಶ್ರಮಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ತಂಡದ ಗೆಲುವಿನ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ನಮ್ಮ ತಂಡದ ಎಲ್ಲ ಆಟಗಾರರು ಪರಿಶ್ರಮಿಸಿದ್ದಾರೆ. ಅವರ ಬಗ್ಗೆ ಹೆಮ್ಮೆಯಿದೆ. ಅವರ ಸಾಧನೆ ಬಗ್ಗೆ ಖುಷಿಯಾಗುತ್ತಿದೆ ಎಂದಿದ್ದಾರೆ.

ಚಿರಕಾಲ ಉಳಿಯುವಂತಾ ನೆನಪುಗಳು ಇವು.ಇಂಥಾ ಕ್ಷಣಗಳು ಮತ್ತು ಇದಕ್ಕಿಂತ ದೊಡ್ಡ ಕಾರ್ಯಗಳು ಭವಿಷ್ಯದಲ್ಲಿ ಬರಲಿ ಎಂದಿದ್ದಾರೆ ರಾಹುಲ್.

ಈ ಹೊತ್ತಲ್ಲಿ ನನ್ನ ಬಗ್ಗೆಯೇ ಹೆಚ್ಚು ಗಮನ ನೀಡಲಾಗುತ್ತಿದೆ ಎಂಬುದನ್ನು ಅರಿತಾಗ ಸಂಕೋಚಕ್ಕೊಳಗಾಗುತ್ತೇನೆ. ಯಾಕೆಂದರೆ ಸಪೋರ್ಟಿಂಗ್ ಸ್ಟಾಫ್ ಮತ್ತು ನಮ್ಮೊಂದಿಗೆ ಸಹಾಯಕ್ಕೆ ನಿಂತ ಎಲ್ಲ ಜನರ ಪರಿಶ್ರಮದಿಂದ ನಾವು ಈ ಗುರಿ ಸಾಧಿಸಿದ್ದೇವೆ. ಕಳೆದ 14 ತಿಂಗಳುಗಳಲ್ಲಿ ನಾವು ಮಾಡಿದ ಪರಿಶ್ರಮ ಫಲಕೊಟ್ಟಿದೆ. ಅವರು ಇದಕ್ಕೆ ಅರ್ಹರು. ನಾನು ಹೆಸರುಗಳನ್ನು ಹೇಳಬಯಸುವುದಿಲ್ಲ, ಆದರೆ ಸಪೋರ್ಟಿಂಗ್ ಸ್ಟಾಫ್‍ಗಳೆಲ್ಲರೂ ಪರಿಶ್ರಮಿಸಿದ್ದಾರೆ. ನಮ್ಮ ಹುಡುಗರಿಗಾಗಿ ನಾವು ಎಲ್ಲ ರೀತಿಯ ಬೆಂಬಲ ನೀಡುತ್ತೇವೆ ಎಂಬುದು ದಿ ವಾಲ್ ರಾಹುಲ್‍ನ ವಿನಯದ ನುಡಿ.

ಪ್ರತಿಕ್ರಿಯಿಸಿ (+)