ಬುಧವಾರ, ಡಿಸೆಂಬರ್ 11, 2019
15 °C

‘ಹೊಟ್ಟೆ ಹಸಿದಾಗ ತಿನ್ನಬೇಕು’

Published:
Updated:
‘ಹೊಟ್ಟೆ ಹಸಿದಾಗ ತಿನ್ನಬೇಕು’

ಯೋಗ, ರಂಗಭೂಮಿ, ಕಥಕ್‌ ನೃತ್ಯಗಳನ್ನು ಮೈಮಾಟ ಕಾಪಾಡಿಕೊಳ್ಳುವ ಸಾಧನವಾಗಿರಿಸಿಕೊಂಡಿರುವವರು ರಾಧಿಕಾ ಚೇತನ್. ಈ ಗುಳಿಕೆನ್ನೆ ಚೆಲುವೆಯು ತನ್ನ ಸುಂದರ ಮೈಮಾಟದ ರಹಸ್ಯವನ್ನು ಖುಷಿಯಿಂದಲೇ ಹಂಚಿಕೊಂಡರು.

ಬೆಳಿಗ್ಗೆ ಎದ್ದ ತಕ್ಷಣ ಇವರು ಮೊದಲು ಮಾಡುವ ಕೆಲಸ ಒಂದು ಲೀಟರ್‌ ನೀರು ಕುಡಿಯುವುದು. ನಂತರ ಒಂದುವರೆ ಗಂಟೆ ಯೋಗ ಮಾಡುತ್ತಾರೆ. ‘ಯೋಗದಿಂದಲೇ ಮನಸಿಗೆ ನೆಮ್ಮದಿ, ಶಾಂತಿ’ ಎನ್ನುವುದು ರಾಧಿಕಾ ಕಂಡುಕೊಂಡಿರುವ ಸತ್ಯ. ಪ್ರತಿದಿನದ ದಿನಚರಿ ಶುರುವಾಗೋದು ಕ್ಯಾಲೆಂಡರ್‌ ಮೂಲಕವೇ. ಇಂದು ಎಲ್ಲೆಲ್ಲಿ, ಏನೇನು ಕಾರ್ಯಕ್ರಮಮಗಳಿವೆ, ಎಲ್ಲಿಗೆ ಹೋಗಬೇಕು ಎನ್ನುವ ನಿರ್ಧಾರವನ್ನು ಕ್ಯಾಲೆಂಡರ್ ನೋಡಿಯೇ ತೆಗೆದುಕೊಳ್ಳುತ್ತಾರಂತೆ.

ಕ್ರ್ಯಾಶ್‌ ಮತ್ತು ಕೆಟೊನಂಥ ಕಠಿಣ ಡಯೆಟ್‌ ಇಷ್ಟಪಡುವುದಿಲ್ಲ. ಹೆಚ್ಚು ಪ್ರೊಟೀನ್‌ ಅಂಶ ಇರುವ ಆಹಾರ ಸೇವಿಸುತ್ತಾರೆ.  ಇಡ್ಲಿ, ವಡೆ, ಸಾಂಬಾರ್‌, ಅವಲಕ್ಕಿ, ಪೂರಿ, ಸಾಗು, ಹಣ್ಣು, ತರಕಾರಿಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಸಿಹಿತಿಂಡಿ, ಸಕ್ಕರೆ ಪದಾರ್ಥಗಳಿಂದ ದೂರ.

‘ಹೊಟ್ಟೆ ಹಸಿದಾಗ ತಿನ್ನಬೇಕು. ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ನಡುವೆ ಕನಿಷ್ಠ 4 ಗಂಟೆಗಳ ಅಂತರ ಕಾಯ್ದುಕೊಳ್ಳಬೇಕು. ರಾತ್ರಿಯ ಊಟ ಮಿತವಾಗಿರಬೇಕು. ಹೊಟ್ಟೆ ಊದಿಕೊಳ್ಳುವಷ್ಟು ತಿನ್ನುವುದರ ಬದಲು ದೇಹಕ್ಕೆ ಎಷ್ಟು ಆಹಾರ ಅಗತ್ಯವೋ ಅಷ್ಟನ್ನು ತಿನ್ನಬೇಕು’ ಎನ್ನುವುದು ಈ ಚೆಲುವೆಯ ನಿಲುವು.

ಮೂಡ್‌ ಬದಲಿಸಿಕೊಳ್ಳಲು ಮನೆಯಲ್ಲೇ ಕಥಕ್‌ ಡಾನ್ಸ್‌ ಮಾಡುತ್ತಾರೆ. ಬಾಲಿವುಡ್‌ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಮಾನಸಿಕ ಒತ್ತಡ ನಿಯಂತ್ರಣಕ್ಕೆ ಸಂಗೀತವೇ ಮದ್ದು ಎನ್ನುವುದು ಅವರ ನಂಬಿಕೆ. ಬಾಲಿವುಡ್‌ ಮತ್ತು ಇಂಗ್ಲಿಷ್‌ ಹಾಡುಗಳಿಗಿಂತ ವಾದ್ಯ ಸಂಗೀತವನ್ನು ಹೆಚ್ಚು ಇಷ್ಟುಪಡುತ್ತಾರೆ. ಯೋಗ ಮಾಡುತ್ತಲೇ ವೀಣಾ ವಾದನವನ್ನೂ ಕೇಳುತ್ತಾರೆ.

ಪ್ರತಿಕ್ರಿಯಿಸಿ (+)