ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಆಫ್ರಿಕಾದಲ್ಲಿ ಭಾರತದ ಹಡಗು ಕಣ್ಮರೆ

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ/ ನವದೆಹಲಿ: ಪಶ್ಚಿಮ ಆಫ್ರಿಕಾದ ಗಿನಿಯಾ ಕೊಲ್ಲಿಯ ಬೆನಿನ್ ಕರಾವಳಿಯಲ್ಲಿ ತೈಲ ತುಂಬಿದ ಭಾರತೀಯ ಟ್ಯಾಂಕರ್‌ ಕಣ್ಮರೆಯಾಗಿದ್ದು, ಅದರಲ್ಲಿ 22 ಸಿಬ್ಬಂದಿ ಇದ್ದರು ಎಂದು ಹಡಗು ಮಹಾ ನಿರ್ದೇಶನಾಲಯ ಭಾನುವಾರ ತಿಳಿಸಿದೆ.

ಈ ಪ್ರದೇಶದಲ್ಲಿ ಕಡಲ್ಗಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಅವರೇ ಹಡಗನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಈವರೆಗೆ ಟ್ಯಾಂಕರ್ ಯಾವುದೇ ಸಂಪರ್ಕಕ್ಕೆ ಸಿಕ್ಕಿಲ್ಲ ಹಾಗೂ ಬಿಡುಗಡೆಗಾಗಿ ಕಡಲ್ಗಳ್ಳರಿಂದ ಹಣದ ಬೇಡಿಕೆ ಕರೆಯೂ ಬಂದಿಲ್ಲ ಎಂದು ನಿರ್ದೇಶನಾಲಯ ಹೇಳಿದೆ.

‘ಮುಂಬೈನ ಆಂಗ್ಲೊ ಈಸ್ಟರ್ನ್ ಶಿಪ್ಪಿಂಗ್ ಕಂಪನಿಯ ವಾಣಿಜ್ಯ ಹಡಗು ಇದಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್‌ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT