ಸೋಮವಾರ, ಡಿಸೆಂಬರ್ 9, 2019
24 °C
ಪ್ರಧಾನಿಯ ಟಾಪ್‌ ಆದ್ಯತೆ ಮಾತಿಗೆ ಟ್ವಿಟರ್‌ನಲ್ಲಿ ಹರಿದಾಡುತ್ತಿವೆ ಸ್ವಾರಸ್ಯಕರ ಪ್ರತಿಕ್ರಿಯೆಗಳು

‘ಮೋದಿ ಅವರು ಸಂಕ್ಷೇಪಾಕ್ಷರ ರೂಪಿಸುವ ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ’

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ಮೋದಿ ಅವರು ಸಂಕ್ಷೇಪಾಕ್ಷರ ರೂಪಿಸುವ ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ’

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಸಮಾವೇಶದಲ್ಲಿ ತರಕಾರಿ ಬೆಳೆಯುವ ರೈತರ ಆದಾಯ ಹೆಚ್ಚಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ(TOP) ಟ್ವಿಟರ್‌ನಲ್ಲಿ ವ್ಯಂಗ್ಯವಾದ ಪ್ರತಿಕ್ರಿಯೆಗಳು ಹರಿದಾಡುತ್ತಿವೆ.

‘ನಮ್ಮ ಸರ್ಕಾರ ತರಕಾರಿ ಬೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅದರಲ್ಲೂ ‘ಟಿಓಪಿ’(TOP) ಟೊಮೆಟೊ, ಆನಿಯನ್‌(ಈರುಳ್ಳಿ), ಪೊಟ್ಯಾಟೊ (ಆಲೂಗಡ್ಡೆ) ಕೃಷಿಗೆ ಹೆಚ್ಚಿನ ಒತ್ತು ನೀಡುತ್ತೇವೆ’ ಎಂದು ತರಕಾರಿಗಳ ಮೊದಲಾಕ್ಷರಗಳನ್ನು ಪೋಣಿಸಿ ಸ್ಮಜನಾತ್ಮಕ ಮಾತನ್ನು ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಮೋದಿ ಅವರ ಮಾತನ್ನು ಉಲ್ಲೇಖಿಸಿ, ನಿರ್ದಿಷ್ಟ ಪದಗಳಿಗೆ ಸ್ವಾರಸ್ಯಕರ ವಿವರಣೆ ನೀಡುತ್ತ, ಹಲವಾರು ಜನರು ಟ್ವಿಟರ್‌ನಲ್ಲಿ ಹಾಸ್ಯದ ಹೊನಲು ಹರಿಸುತ್ತಿದ್ದಾರೆ.

‘ಮೋದಿ ಅವರು ಸಂಕ್ಷೇಪಾಕ್ಷರಗಳನ್ನು ರೂಪಿಸುವ ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ’ ಎಂದು ಕೀರ್ತಿ ಯಾದವ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. ಅದಕ್ಕಾಗಿ ಅವರು SAD ಪದವನ್ನು Serious Acronym Disorder ಎಂದು ವಿಸ್ತರಿಸಿದ್ದಾರೆ.

ಮೋದಿ ಅವರ ಮಾತನ್ನು ಉಲ್ಲೇಖಿಸಿ ಸಂದೀಪನ್‌ ಮಿತ್ರ ಎಂಬುವರು, ‘ನೀವೊಬ್ಬ ಮೊರನ್‌(MORON–ಪೆದ್ದ)’. ಎಂದೇಳಿ ಈ ಪದವನ್ನು ಮ್ಯಾಂಗೊ, ಆರೆಂಜ್‌, ರಡಿಸ್‌(ಮೂಲಂಗಿ), ಆಲಿವ್‌ (ಒಂದು ವಿಧದ ಹಣ್ಣು), ನಟ್‌ಮಗ್‌(ಜಾಜಿಕಾಯಿ) ಎಂದು ವಿಸ್ತರಣೆ ಮಾಡಿದ್ದಾರೆ.

ಮತ್ತೊಬ್ಬರು LOOT(ಕೊಳ್ಳೆಯೊಡಿ) ಪದವನ್ನು ಮೋದಿ ಮಾತಿಗೆ ಜೋಡಿಸಿ, ‘ಲೂಟ್‌ ಅನ್ನು ಲೆಮನ್‌, ಆನಿಯನ್‌, ಒಕ್ರಾ(ಬೆಂಡೇಕಾಯಿ) ಮತ್ತು ಟೊಮೆಟೊ’ ಎಂದು ವಿಸ್ತರಿಸಿದ್ದಾರೆ.

ರೋಷನ್‌ ಎಂಬುವರು, ‘ಅವರು TOOPLESS ಗೆ ಆದ್ಯತೆ ನೀಡುತ್ತೇನೆ ಎಂದು ಹೇಳದಿರುವುದಕ್ಕೆ ಸಂತಸ ಪಡೋಣ’ ಎಂದಿದ್ದಾರೆ. ಅವರ ಪ್ರಕಾರ ಟಾಪ್‌ಲೆಸ್‌ ಎಂದರೆ, ‘ಟೊಮೆಟೊ, ಆನಿಯನ್‌, ಪೊಟ್ಯಾಟೊ, ಲೆಡೀಸ್‌ ಫಿಂಗರ್‌(ಬೆಂಡೇಕಾಯಿ), ಎಗ್‌ಪ್ಲ್ಯಾಂಟ್‌(ಒಂದು ವಿಧದ ಬದನೆ), ಸ್ಪಿನಚ್‌(ಪಾಲಕ್‌) ಮತ್ತು ಸೊಯಾಬೀನ್‌’.

‘ಮೋದಿ ಅವರ ಪ್ರಕಾರ ಟಾಪ್‌ ಎಂದರೆ ಮೂರು ತರಕಾರಿಗಳಂತೆ. ಹಾಗಾದರೆ, ಅವರು ಈವರೆಗೂ ನೀಡಿರುವ ಹೇಳಿಕೆ ಮತ್ತು ಮಾಡಿರುವ ಟ್ವೀಟ್‌ಗಳನ್ನು ಡಿಕೋಡ್‌ ಮಾಡಿ, ಅವುಗಳ ಅರ್ಥವನ್ನು ಕಂಡುಕೊಳ್ಳಬೇಕಿದೆ’ ಎಂದು ಜಾಯ್‌ ಎಂಬುವರು ಟ್ವೀಟ್‌ ಮೂಲಕ ಚಟಾಕಿ ಹಾರಿಸಿದ್ದಾರೆ.

‘70 ವರ್ಷಗಳಲ್ಲಿ ದೇಶಕಂಡ ಟಾಪ್‌ ಪ್ರಧಾನಿ ಮೋದಿ ಎಂದು ಭಕ್ತರು ಹೇಳುತ್ತಿದ್ದಾಗ, ನಾನು ಈ ಪದದ ನಿಜಾರ್ಥ ತಿಳಿಯದೇ ವಾದ ಮಾಡುತ್ತಿದ್ದೆ. ಈಗ ತಿಳಿಯುತ್ತಿದೆ ನಾವು ಹಿಂದೇ ಎಲ್ಲಿದ್ದೇವೆಯೋ, ಅಲ್ಲಿಯೇ ಇದ್ದೆವೆಂದು’. ಎಂದು ವಿಜಯ್ ವಿಠಲ್‌ ಎಂಬುವರು ವ್ಯಂಗ್ಯವಾಡಿದ್ದಾರೆ.

‘ಮೋದಿ ಟಾಪ್‌ ಆದ್ಯತೆಯನ್ನು ಮೂರು ತರಕಾರಿಗಳಿಗೆ ಕೊಟ್ಟಿದ್ದರಿಂದಲೇ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ, ನಿರುದ್ಯೋಗ, ರೈತರ ಆತ್ಮಹತ್ಯೆ ಮತ್ತು ಮಹಿಳಾ ದೌರ್ಜನ್ಯದಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸೋತಿದ್ದಾರೆ’ ಎಂಬ ಟ್ವೀಟ್‌ವೊಂದು ಅನಾಮಿಕ ಖಾತೆಯಲ್ಲಿದೆ.

‘ಈ ಮೂರು ತರಕಾರಿಗಳನ್ನು ಹಿಟ್ಟಿನಲ್ಲಿ ಚನ್ನಾಗಿ ಕಲೆಸಿ, ಕರೆಯಿರಿ ಅದರಿಂದ ಸ್ವಾದಿಷ್ಟ ಪಕೋಡ ತಯಾರಾಗುತ್ತದೆ. 2019ರ ಲೋಕಸಭಾ ಚುನಾವಣೆಯ ಬಳಿಕ ನೀವು ಟೈಮ್‌ಪಾಸ್‌ ಮಾಡಲು ಅದನ್ನು ಸವಿಯಬಹುದು’ ಎಂದು ಜವೂರ್‌ ಅಬಿದಿ ಎಂಬುವರು ಹೇಳಿದ್ದಾರೆ. ಇದು ಮೋದಿ ಅವರು ಉದ್ಯೋಗದ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಗೆ ವ್ಯಂಗ್ಯವಾಡಿದಂತಿದೆ.

ಪ್ರತಿಕ್ರಿಯಿಸಿ (+)