ಶಾಹಿದ್ ಕಪೂರ್ ಹಾಗೂ ಅವರ ಪತ್ನಿ ಮೀರಾ ರಜಪೂತ್ ಬಾಲಿವುಡ್ ಜಗತ್ತಿನ ಚೆಂದದ ದಂಪತಿ ಎಂದೇ ಪ್ರಸಿದ್ಧರು. ಈಚೆಗೆ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ರ‍್ಯಾಂಪ್ ಮೇಲೆ ಜೊತೆಯಾಗಿ ಕ್ಯಾಟ್‌ವಾಕ್ ಮಾಡುವ ಮೂಲಕ ಮತ್ತೊಮ್ಮೆ ಕ್ಯಾಮೆರಾ ಕಣ್ಣುಗಳಲ್ಲಿ ಬೆಳಗಿದರು. ಅನಿತಾ ಡೋಂಗ್ರೆ ವಿನ್ಯಾಸದ ‘ಸಾಂಗ್ ಆಫ್ ಸಮ್ಮರ್’ ಸಂಗ್ರಹಕ್ಕೆ ಇವರಿಬ್ಬರೂ ಶೋಸ್ಟಾಪರ್‌ಗಳಾಗಿ ಭಾಗವಹಿಸಿದ್ದರು.

‘ಮೀರಾ ನಮ್ಮ ಮದುವೆ ದಿನ ಎಷ್ಟು ಚೆನ್ನಾಗಿ ಕಾಣುತ್ತಿದ್ದಳೋ ಅಷ್ಟೇ ಸುಂದರವಾಗಿ ಕಾಣುತ್ತಿದ್ದಾಳೆ. ಇವತ್ತು ಇನ್ನೊಮ್ಮೆ ಈಕೆಯನ್ನೇ ಮದುವೆ ಆಗೋಣ ಎನಿಸುತ್ತಿದೆ’ ಎಂದೂ ಶಾಹಿದ್ ಹೇಳಿದಾಗ ಮೀರಾ ನಾಚಿ ನೀರಾದರು. ರ‍್ಯಾಂಪ್‌ವಾಕ್‌ಗಿಂತ ಹೆಚ್ಚಾಗಿ ತಮ್ಮ ವ್ಯಕ್ತಿತ್ವದ ಮೂಲಕ ಈ ಜೋಡಿ ಹೆಚ್ಚು ಆಪ್ತವಾಯಿತು. ಶಾಹಿದ್ ತೊಟ್ಟಿದ್ದ ಶೇರ್ವಾನಿಗೆ ಒಪ್ಪುವ ಲೆಹೆಂಗಾ ಚೋಲಿ ತೊಟ್ಟಿದ್ದರು ಮೀರಾ. ಥೇಟ್ ಮದುಮಕ್ಕಳಂತೆ ಕಂಗೊಳಿಸುತ್ತಿದ್ದರೆ ವಿನ್ಯಾಸಕಿಗೆ ಖುಷಿಯೋ ಖುಷಿ.

ಕೈಕೈ ಹಿಡಿದು ವೇದಿಕೆ ಏರಿ ಬೆಕ್ಕಿನ ಹೆಜ್ಜೆ ಇಡುತ್ತಾ ವೇದಿಕೆ ಮಧ್ಯಕ್ಕೆ ಬರುವಷ್ಟು ಹೊತ್ತಿಗೆ ಮೀರಾ ಕಿವಿಯಲ್ಲಿ ಶಾಹಿದ್ ಏನೋ ಉಸುರಿದರು. ಮೀರಾ ಇನ್ನೊಮ್ಮೆ ನಾಚಿದರು. ಫ್ಯಾಷನ್ ಪ್ರೇಮಿಗಳು ಚಪ್ಪಾಳೆಯ ಮೆಚ್ಚುಗೆ ಸೂಚಿಸಿದರು.

‘ನಮ್ಮಿಬ್ಬರದೂ ಬೇರೆ ಬೇರೆ ಹಿನ್ನೆಲೆ. ಆದರೆ ಪರಸ್ಪರ ಗೌರವಿಸಿಕೊಳ್ಳುತ್ತೇವೆ. ಆಕೆ ಯಾವ ದಿರಿಸು ತೊಟ್ಟರೂ ನನ್ನ ಕಣ್ಣಿಗೆ ಚೆನ್ನಾಗಿಯೇ ಕಾಣುತ್ತಾಳೆ’ ಎಂದರು ಶಾಹಿದ್. ‘ರ‍್ಯಾಂಪ್ ಮೇಲೆ ಮೊದಲ ಬಾರಿಗೆ ಹೆಜ್ಜೆ ಇಟ್ಟಿದ್ದೇನೆ. ಅನೇಕ ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿರುವವರೇ ಅಲ್ಲಿ ಹೆಜ್ಜೆ ಇಟ್ಟಿದ್ದರು. ಭಯದಲ್ಲಿ ಕುಸಿದುಹೋಗುತ್ತೇನೆಯೇ ಎಂಬ ಆತಂಕವೂ ಇತ್ತು. ಶಾಹಿದ್ ಕೈಹಿಡಿದುಕೊಂಡಿದ್ದರಿಂದ ಸುರಕ್ಷಿತವಾಗಿದ್ದೇನೆ ಎಂಬ ಧೈರ್ಯ ಇತ್ತು’ ಎಂದು ಮೀರಾ ಹೇಳಿದರು.

ಈ ದಂಪತಿ ಫೋಟೊವನ್ನು ವಿನ್ಯಾಸಕಿ ಅನಿತಾ ಡೋಂಗ್ರೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 27 ಸಾವಿರ ಜನ ಮೆಚ್ಚಿಕೊಂಡಿದ್ದಾರೆ. ಮೀರಾ ತಮ್ಮ ಖಾತೆಯಲ್ಲಿ ಸುಮಾರು ಎರಡು ಲಕ್ಷ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಸಾವಿರಾರು ಮಂದಿ ಕಮೆಂಟ್‌ಗಳನ್ನೂ ಹಾಕಿದ್ದಾರೆ. →v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.