ಬುಧವಾರ, ಡಿಸೆಂಬರ್ 11, 2019
24 °C

ಬೆಳ್ಳಂದೂರು ಕೆರೆಗೆ ಡ್ರೋನ್‌ ಕಣ್ಗಾವಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಂದೂರು ಕೆರೆಗೆ ಡ್ರೋನ್‌ ಕಣ್ಗಾವಲು

ಬೆಂಗಳೂರು: ಬೆಳ್ಳಂದೂರು ಕೆರೆಯ ಮೇಲೆ ಕಣ್ಗಾವಲಿಡಲು ಡ್ರೋನ್‌ ಕ್ಯಾಮೆರಾಗಳನ್ನು ಬಳಸಲು ಬಿಬಿಎಂಪಿ ನಿರ್ಧರಿಸಿದೆ.

ಜಲಮೂಲದ ಸುತ್ತಲೂ ಬಿಗಿ ಭದ್ರತೆ ಒದಗಿಸಲು ಉದ್ದೇಶಿಸಲಾಗಿದೆ. ಮಾಜಿ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ಮುಂದಿನ ವಾರ ನೇಮಕ ಮಾಡಲಾಗುತ್ತದೆ. ಪ್ರಹರಿ ಪಡೆ ನಿಯೋಜನೆ ಹಾಗೂ ಡ್ರೋನ್‌ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ಇವು ಪ್ರತಿದಿನ ಎರಡು ಬಾರಿ ಕೆರೆ ಪರಿಸರದಲ್ಲಿ ಸುತ್ತಾಟ ನಡೆಸಲಿವೆ. ನಿಯಂತ್ರಣ ಕೊಠಡಿಯ ಮೂಲಕ ಇವುಗಳನ್ನು ನಿಯಂತ್ರಿಸಲಾಗುತ್ತದೆ.

ಕಸ ಹಾಗೂ ಕಟ್ಟಡ ತ್ಯಾಜ್ಯ ಸುರಿದಿರುವುದು ಕಂಡುಬಂದರೆ ಮಾರ್ಷಲ್‌ಗಳು ಹಾಗೂ ಪ್ರಹರಿ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗುತ್ತದೆ. ಕೆರೆಯ ಭದ್ರತೆ ಕುರಿತು ಮಾರ್ಷಲ್‌ಗಳು ಪ್ರತಿದಿನ ವರದಿ ನೀಡಬೇಕು. ಅದನ್ನು ಬಿಡಿಎ, ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಾರಕ್ಕೊಮ್ಮೆ ಪರಿಶೀಲಿಸಲಿದ್ದಾರೆ ಎಂದು ಪಾಲಿಕೆ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆಯ ಸುತ್ತಲೂ ಪ್ರಖರ ಬೆಳಕಿನ ದೀಪಗಳನ್ನು ಹಾಗೂ ಇನ್ನಷ್ಟು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದರು.

ಅಂಕಿ ಅಂಶ

₹5 ಲಕ್ಷ

ಕೆರೆಗೆ ಕಸ ಹಾಕಿದವರಿಗೆ ವಿಧಿಸುವ ದಂಡದ ಮೊತ್ತ

8

ಕಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ

ಪ್ರತಿಕ್ರಿಯಿಸಿ (+)