ಕ್ರಿಕೆಟ್‌ ಬದುಕಿಗೆ ಬೊಲಿಂಜರ್‌ ವಿದಾಯ

7

ಕ್ರಿಕೆಟ್‌ ಬದುಕಿಗೆ ಬೊಲಿಂಜರ್‌ ವಿದಾಯ

Published:
Updated:
ಕ್ರಿಕೆಟ್‌ ಬದುಕಿಗೆ ಬೊಲಿಂಜರ್‌ ವಿದಾಯ

ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್‌ ಡಗ್‌ ಬೊಲಿಂಜರ್‌, ಸೋಮವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದಾರೆ.

2009ರಲ್ಲಿ ಟೆಸ್ಟ್‌ ಮತ್ತು ಏಕದಿನ ಮಾದರಿಗಳಿಗೆ ಪದಾರ್ಪಣೆ ಮಾಡಿದ್ದ ಬೊಲಿಂಜರ್‌, 2011ರಲ್ಲಿ ದಕ್ಷಿಣ ಆಫ್ರಿಕಾ ಎದುರು ಮೊದಲ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯ ಆಡಿದ್ದರು. 2014ರ ನಂತರ ಅವರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

36 ವರ್ಷದ ಬೊಲಿಂಜರ್‌, ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ನ್ಯೂ ಸೌತ್‌ವೇಲ್ಸ್‌ ಪರ 124 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, 411 ವಿಕೆಟ್‌ ಉರುಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry