ಮಂಗಳವಾರ, ಡಿಸೆಂಬರ್ 10, 2019
19 °C
ಪೊಲೀಸ್‌ ಕಾನ್‌ಸ್ಟೇಬಲ್

ಶ್ರೀನಗರ: ಆಸ್ಪತ್ರೆ ಮೇಲೆ ಉಗ್ರರ ದಾಳಿ, ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನಿ ಉಗ್ರ ಪರಾರಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಶ್ರೀನಗರ: ಆಸ್ಪತ್ರೆ ಮೇಲೆ ಉಗ್ರರ ದಾಳಿ, ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನಿ ಉಗ್ರ ಪರಾರಿ

ಶ್ರೀನಗರ: ಇಲ್ಲಿನ ಶ್ರೀ ಮಹಾರಾಜ ಹರಿಸಿಂಗ್ ಆಸ್ಪತ್ರೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್‌ ಕಾನ್‌ಸ್ಟೇಬಲ್ ಒಬ್ಬರು ಮೃತಪಟ್ಟಿದ್ದು,  ಚಿಕಿತ್ಸೆಗಾಗಿ ಬಂದಿದ್ದ  ಪಾಕಿಸ್ತಾನದ ಬಂಧಿತ ಉಗ್ರನೊಬ್ಬ ಪರಾರಿಯಾಗಿದ್ದಾನೆ.

ಚಿಕಿತ್ಸೆಗಾಗಿ ಬಂದಿದ್ದ  ಪಾಕಿಸ್ತಾನ ಉಗ್ರ ಅಬು ಹಂಜುಲ್ಲಾ ಅಲಿಯಾಸ್ ನವೀದ್ ಜಾಟ್ ಪರಾರಿಯಾದ ಉಗ್ರ . ಈ ಉಗ್ರನನ್ನು ಕೆಲವು ತಿಂಗಳ ಹಿಂದೆ ಶೋಪಿಯಾನ್‌ನಲ್ಲಿ ಬಂದಿಸಲಾಗಿತ್ತು.

ಸೆಂಟ್ರಲ್ ಜೈಲಿನಲ್ಲಿದ್ದ ಆರು ಕೈದಿಗಳನ್ನು ಚಿಕಿತ್ಸೆಯ ಸಲುವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಉಗ್ರರು ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಇದೇ ವೇಳೆ ಉಗ್ರ ನವೀದ್ ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ರಕ್ಷಣಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಸ್ಮಾಯಿಲ್ ಪರ್ರೆ ಅವರು ಘಟನೆಯನ್ನು ವಿವರಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)