ಗುರುವಾರ , ಡಿಸೆಂಬರ್ 12, 2019
26 °C

ಫಲ ಕೊಟ್ಟ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫಲ ಕೊಟ್ಟ ನಿರೀಕ್ಷೆ

ಅನುಷ್ಕಾ ಶೆಟ್ಟಿ ಅಭಿನಯದ ‘ಭಾಗಮತಿ’ ಸಿನಿಮಾ ಅಮೆರಿಕದಲ್ಲಿ ಮಿಲಿಯನ್‌ ಡಾಲರ್‌ ಕ್ಲಬ್‌ಗೆ ಸೇರ್ಪಡೆಗೊಂಡಿದೆ.

ಅನುಷ್ಕಾ ಶೆಟ್ಟಿ ಅವರ ವೃತ್ತಿ ಜೀವನದಲ್ಲಿ ಇದು ಮೈಲಿಗಲ್ಲು ಎಂದೇ ಬಿಂಬಿಸಲಾಗುತ್ತಿದೆ. ಈವರೆಗೆ ₹50 ಕೋಟಿ ಹಣ ಗಳಿಸಿದೆ. ನಾಯಕಿ ಪ್ರಧಾನ ಚಿತ್ರವು ಅಮೆರಿಕವೊಂದರಲ್ಲೇ 10 ಲಕ್ಷ ಡಾಲರ್ (₹6.41 ಕೋಟಿ) ಗಳಿಸಿ ಮಿಲಿಯನ್‌ ಡಾಲರ್‌ ಕ್ಲಬ್‌ ಸಿನಿಮಾ ಪಟ್ಟಿಗೆ ಸೇರಿದೆ.

ಅನುಷ್ಕಾ ಶೆಟ್ಟಿ ಅಭಿನಯದ ಚಿತ್ರವೊಂದು ಈ ಗೌರವಕ್ಕೆ ಪಾತ್ರವಾಗಿರುವುದು ಇದೇ ಮೊದಲು. ಈ ಹಿಂದಿನ ‘ರುದ್ರಮಾದೇವಿ’ ಚಿತ್ರವು  9.70  ಲಕ್ಷ ಡಾಲರ್ (ಸುಮಾರು ₹6.22 ಕೋಟಿ) ಗಳಿಸಿದ್ದರೂ ಮಿಲಿಯನ್‌ ಡಾಲರ್‌ ಕ್ಲಬ್‌ ಸೇರಿರಲಿಲ್ಲ.

ಈ ಚಿತ್ರವೂ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿಯೂ ತೆರೆ ಕಂಡಿದೆ.

ಬಿಗಿಯಾದ ನಿರೂಪಣೆ ಮತ್ತು ಹದವರಿತ ಅಭಿನಯ ‘ಭಾಗಮತಿ’ ಯಶಸ್ಸಿನ ಮುಖ್ಯ ಕಾರಣಗಳು. ಈ ಚಿತ್ರದ ನಿರ್ದೇಶಕ ಜಿ. ಅಶೋಕ್ 2012ರಲ್ಲಿಯೇ ‘ಭಾಗಮತಿ’ಯ ಚಿತ್ರಕಥೆ ಸಿದ್ಧಪಡಿಸಿ, ಅನುಷ್ಕಾ ಶೆಟ್ಟಿಗೆ ಹೇಳಿದ್ದರು. ಆದರೆ ‘ಬಾಹುಬಲಿ’ ಸರಣಿ ಮತ್ತು ‘ರುದ್ರಮಾದೇವಿ’ಯಲ್ಲಿ ತೊಡಗಿಸಿಕೊಂಡಿದ್ದ ಅನುಷ್ಕಾ ತಕ್ಷಣ ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದರು. ಆದರೆ, ಅನುಷ್ಕಾ ಬಿಟ್ಟು ಬೇರ‍್ಯಾರನ್ನೂ ‘ಭಾಗಮತಿ’ಯಾಗಿ ಕಲ್ಪಿಸಿಕೊಳ್ಳಲು ಅಶೋಕ್‌ಗೆ ಆಗಲಿಲ್ಲ.

ಅವರ ಸುದೀರ್ಘ ಐದು ವರ್ಷದ ನಿರೀಕ್ಷೆ ಇದೀಗ ಫಲ ಕೊಟ್ಟಿದೆ. ‘ಭಾಗಮತಿ’ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ.⇒v

ಪ್ರತಿಕ್ರಿಯಿಸಿ (+)