ಮಂಗಳವಾರ, ಡಿಸೆಂಬರ್ 10, 2019
20 °C

ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಲು ಸಚಿನ್ ತೆಂಡೂಲ್ಕರ್ ಒತ್ತಾಯ

Published:
Updated:
ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಲು ಸಚಿನ್ ತೆಂಡೂಲ್ಕರ್ ಒತ್ತಾಯ

ನವದೆಹಲಿ: ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಿ ಆಟಗಾರರನ್ನು ಪಿಂಚಣಿ ಯೋಜನೆಯಡಿ ಸೇರಿಸಬೇಕು ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸಿದ್ದಾರೆ.

ಈ ಕುರಿತು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಎಒ) ಅಧ್ಯಕ್ಷ ವಿನೋದ್ ರಾಯ್‌ಗೆ ಪತ್ರ ಬರೆದಿರುವ ಅವರು ‘ಅಂಧ ಕ್ರಿಕೆಟಿಗರ ತಂಡದವರು ನಾಲ್ಕನೇ ಬಾರಿ ವಿಶ್ವಕಪ್‌ ಗೆದ್ದಿದ್ದಾರೆ. ಆದರೂ ಅವರಿಗೆ ಮಾನ್ಯತೆ ಸಿಗಲಿಲ್ಲ’ ಎಂದು ಹೇಳಿದ್ದಾರೆ. ಜನವರಿ 20ರಂದು ನಡೆದ ಅಂಧರ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡದ ಪ್ರಶಸ್ತಿ ಗೆದ್ದಿತ್ತು.

‘ಅಂಧ ಆಟಗಾರರು ಕ್ರೀಡಾಂಗಣದಲ್ಲಿ ತೋರುವ ಸಾಮರ್ಥ್ಯ ಇತರರಿಗೆ ಮಾದರಿ. ಭಾರತ ತಂಡದವರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಆಟದ ಮೇಲೆ ಗಮನವಿಟ್ಟು ವಿಶ್ವಕಪ್ ಗೆದ್ದಿದ್ದಾರೆ. ಆ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ. ಅವರ ಗೆಲುವು ಮನುಷ್ಯನ ಮನಸ್ಸಿನ ಅಪರಿಮಿತ ಶಕ್ತಿಯನ್ನು ತೋರಿಸಿಕೊಟ್ಟಿದೆ’ ಎಂದು ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಗೆದ್ದ ತಂಡದ ಆಟಗಾರರನ್ನು ಗೌರವಿಸಲಾಗುವುದು ಎಂದು ವಿನೋದ್ ರಾಯ್ ಈ ಹಿಂದೆ ಘೋಷಿಸಿದ್ದರು.

ಪ್ರತಿಕ್ರಿಯಿಸಿ (+)