ಗೋಮಟೇಶ್ವರ

7

ಗೋಮಟೇಶ್ವರ

Published:
Updated:

ಎನಿತೆತ್ತರಾ ಲೋಕೋತ್ತರ

ಗೋಮಟೇಶ್ವರ ಭವ್ಯಾಕಾರ

ವದನದಿ ಬೆಳಗುವ ನಿರ್ಮಲ ಹಾಸ

ಕಳಚಿಯೆ ನಿಂದಿಹ ಮೋಹದ ಪಾಶ.

ಸದಮಲ ದಿವ್ಯ ದಿಗಂಬರ ವೇಷ

ಮೇಲ್ಗಾಪದುವೆ ಅನಂತಾಕಾಶ

ಹಣೆಯಲಿ ಸೊಬಗಿನ ಸುಳಿಸುಳಿ ಕುರುಳು

ಮುಖದಲಿ ಮಿಂಚಿದೆ ಅರಿವಿನ ಹುರುಳು

ನಗುತಿಹನೀಕ್ಷಿಸಿ ಲೋಕದ ಮರುಳು

ನೀತಿಗೊಲಿನ ಸದ್ಧರ್ಮದ ನೆರಳು

ಪಾದಮೂಲದಿ ಕುಕ್ಕುಟ ನಾಗ

ನಾಲಗೆ ಸುತ್ತಿದೆ ವಲ್ಲರಿರಾಗ

ಆಜಾನುಬಾಹು ಪ್ರತಿಮಾಯೋಗ

ಆಕಾರವಾಂತಿಹ ನಿರುಪಮ ತ್ಯಾಗ

ಉಕ್ಕಿ ಹರಿದಿದೆ ಕರುಣೆಯ ಕಾಂತಿ

ಬಿಟ್ಟು ತೊಲಗಿದೆ ಭಯ ವಿಭ್ರಾಂತಿ

ಬೆಳಗಿದೆ ಪದತರ ಮೋಕ್ಷದ ಶಾಂತಿ

ತೊಳಗಿದೆ ಪರಮ ಅಹಿಂಸೆಯ ನೀತಿ

ಅಮೃತ ಸೋಮೇಶ್ವರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry