ಮಂಗಳವಾರ, ಮೇ 26, 2020
27 °C

ಪೈ ಇಂಟರನ್ಯಾಷನಲ್‌: ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೈ ಇಂಟರನ್ಯಾಷನಲ್‌: ಅದೃಷ್ಟಶಾಲಿ ಗ್ರಾಹಕರಿಗೆ ಬಹುಮಾನ ವಿತರಣೆ

ಬೆಂಗಳೂರು: ಗೃಹೋಪಯೋಗಿ, ವಿದ್ಯುನ್ಮಾನ, ಪೀಠೋಪಕರಣ, ಲ್ಯಾಪ್‌ಟಾಪ್‌, ಮೊಬೈಲ್‌ ಸೇರಿದಂತೆ ವೈವಿಧ್ಯಮಯ ಗ್ರಾಹಕ ಉತ್ಪನ್ನಗಳ ಮಾರಾಟ ಸರಣಿ ಸಂಸ್ಥೆ ಪೈ ಇಂಟರ್‌ನ್ಯಾಷನಲ್ ಹಮ್ಮಿಕೊಂಡಿದ್ದ  ವಿಶೇಷ ಮಾರಾಟ (ಮೆಗಾ ಫೆಸ್ಟಿವಲ್‌ ಸೇಲ್‌) ಅಭಿಯಾನದ  ಕರ್ನಾಟಕ ವಲಯದ ಅದೃಷ್ಟಶಾಲಿ ವಿಜೇತರಿಗೆ ಬಹುಮಾನ ವಿತರಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ, ಮೆಗಾ ಬಹುಮಾನ ರೂಪದಲ್ಲಿ ಹುಂಡೈ ಎಕ್ಸೆಂಟ್‌ , ಹುಂಡೈ ಗ್ರ್ಯಾಂಡ್‌ ಐ10 (ಸೂಪರ್‌ ಬಂಪರ್‌), ಹುಂಡೈ ಇಆನ್‌ ಕಾರ್‌ (ಬಂಪರ್‌), ಪೈ ಇಂಟರ್‌ ನ್ಯಾಷನಲ್‌ನಲ್ಲಿ ₹ 50 ಸಾವಿರ ಮೊತ್ತದ ಉಚಿತ ಸರಕು ಖರೀದಿಯ ಮೊದಲ ಬಹುಮಾನ ಮತ್ತು ₹ 25 ಸಾವಿರ ಮೊತ್ತದ ಸರಕು ಖರೀದಿಯ ಬಹುಮಾನಗಳನ್ನು  ವಿತರಿಸಲಾಯಿತು.

ಸಂಸ್ಥೆಯ ಸಂಪೂರ್ಣ ಸುಸಜ್ಜಿತ ಷೋರೂಂಗಳು ಕರ್ನಾಟಕ ರಾಜ್ಯದಾದ್ಯಂತ ಮತ್ತು ಹೈದರಾಬಾದ್‌, ವಿಶಾಖಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಷೋರೂಂಗಳಲ್ಲಿ ಮಾರಾಟವಾಗುವ ವೈವಿಧ್ಯಮಯ ಉತ್ಪನ್ನಗಳು ಗ್ರಾಹಕರ ಅಪಾರ ವಿಶ್ವಾಸಕ್ಕೆ ಪಾತ್ರವಾಗಿವೆ ಎಂದು ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.