600 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ

7

600 ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣ

Published:
Updated:

ಮಸ್ಕಿ: ‘ಪಟ್ಟಣದಲ್ಲಿ 600 ಕುಟುಂಬಗಳಿಗೆ ಶೀಘ್ರದಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಡಲಾಗುವುದು’ ಎಂದು ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ ಹೇಳಿದರು.

ಬುಧವಾರ ವೈಯಕ್ತಿಕ ಶೌಚಾಲಯಕ್ಕಾಗಿ ಕಾಲುವೆ ಪಕ್ಕದಲ್ಲಿ ಸಿದ್ಧಪಡಿಸಲಾಗುತ್ತಿರುವ ಸಿಮೆಂಟ್ ರಿಂಗ್‌ಗಳನ್ನು ಪರಿಶೀಲಿಸಿ ಮಾತನಾಡಿದ ಅವರು ‘ವೈಯಕ್ತಿಕ ಶೌಚಾಲಯ ಕೇಳಿ 650 ಜನರು ಪುರಸಭೆಗೆ ಅರ್ಜಿ ಸಲ್ಲಿಸಿದ್ದಾರೆ. ಸದ್ಯ 600 ಜನರಿಗೆ ಸೌಲಭ್ಯ ಕಲ್ಪಿಸಲಾಗುವುದು, ಹಂತ ಹಂತವಾಗಿ ಉಳಿದ ಜನರಿಗೆ ವ್ಯಯಕ್ತಿಕ ಶೌಚಾಲಯ ಒದಗಿಸಲಾಗುವುದು’ ಎಂದು ತಿಳಿಸಿದರು.

‘ಪ್ರತಿ ಶೌಚಾಲಯಕ್ಕೆ ಸರ್ಕಾರ ₹15 ಸಾವಿರ ನಿಗದಿ ಮಾಡಿದೆ. ಶೌಚಾಲಯಗಳನ್ನು ಸಿದ್ಧಪಡಿಸಿ ಫಲಾನುಭವಿಯ ಮನೆಯ ಪಕ್ಕದಲ್ಲಿ ನಿರ್ಮಿಸಲಾಗುವುದು ಇದಕ್ಕಾಗಿ ಪುರಸಭೆಯಲ್ಲಿ ₹ 75 ಲಕ್ಷ ಹಣ ಮೀಸಲಿಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ತಿಳಿಸಿದರು.

‘1,650 ಜನರಿಗೆ ಶೌಚಾಲಯ ಒದಗಿಸುವ ಗುರಿ ಹೊಂದಲಾಗಿದೆ. ಈಗಾಗಲೇ 253 ಜನರಿಗೆ ವೈಯಕ್ತಿಕ ಶೌಚಾಲಯ ಕಲ್ಪಿಸಿಕೊಡಲಾಗಿದೆ, ಬರುವ ದಿನಗಳಲ್ಲಿ ಹಂತ ಹಂತವಾಗಿ ಪ್ರತಿಯೊಂದು ಮನೆಗೂ ಶೌಚಾಲಯ ಒದಗಿಸಲು ಪುರಸಭೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ’ ಎಂದರು. ಪುರಸಭೆ ಎಂಜಿನಿಯರ್ ಮೀನಾಕ್ಷಿ, ಪುರಸಭೆ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry