ಏಕನಾಥಮ್ಮ ದೇವಿ ಪುನರ್‌ ಪ್ರತಿಷ್ಠಾಪನೆ

7

ಏಕನಾಥಮ್ಮ ದೇವಿ ಪುನರ್‌ ಪ್ರತಿಷ್ಠಾಪನೆ

Published:
Updated:

ರಿಪ್ಪನ್‌ಪೇಟೆ: ಸಮೀಪದ ಹೊಂಬುಜ ದಲ್ಲಿರುವ ಪುರಾತನ ಏಕನಾಥಮ್ಮ ದೇವಿಯ ಪುನರ್‌ ಪ್ರತಿಷ್ಠಾಪನೆಯ ಎರಡನೇ ದಿನದ ಕಾರ್ಯಕ್ರಮ ಬುಧವಾರ ಅದ್ದೂರಿಯಾಗಿ ಜರುಗಿತು.

ಹೊಂಬುಜ ಮಠದ ಪೀಠಾಧಿಕಾರಿ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಏಕನಾಥಮ್ಮ ದೇವಿಯ ಪ್ರತಿಷ್ಠಾಪನೆ, ನೂತನ ಬಸದಿಯ ಪ್ರತಿಷ್ಠಾಪನೆ ಹಾಗೂ ಶಿಖರ ಪ್ರತಿಷ್ಠಾಪನಾ ವಿಧಿಗಳು ನಡೆದವು. ಶಿವಮೊಗ್ಗದ ಪುರೋಹಿತ ವಸಂತ ಭಟ್‌ ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಮಠ ದಿಂದ ಸ್ವಾಮೀಜಿ ಅವರನ್ನು ಪೂರ್ಣ ಕುಂಭ ಮೆರವಣಿಗೆಯಲ್ಲಿ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಡೊಳ್ಳು ಕುಣಿತ, ವಾದ್ಯಗೋಷ್ಠಿ ಮೆರವಣಿಗೆಗೆ ಮೆರುಗು ತುಂಬಿದ್ದವು. ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ದೇವಿಯ ಸನ್ನಿಧಿಯಲ್ಲಿ ಗುರುವಾರ ಬೆಳಿಗ್ಗೆ 9ಕ್ಕೆ ಪರಿ ಕಲಶ ಸಹಿತ ಬ್ರಹ್ಮ ಕುಂಭಾಭಿಶೇಕ, ಮಹಾಪೂಜೆಗಳು ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ದೇಗುದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry