1.10 ಲಕ್ಷ ಗ್ರಾಮಪಂಚಾಯಿತಿಗಳಿಗೆ ಅಂತರ್ಜಾಲ ಸೇವೆ : ಕೇಂದ್ರ ಸಚಿವ ತೋಮರ್‌

7

1.10 ಲಕ್ಷ ಗ್ರಾಮಪಂಚಾಯಿತಿಗಳಿಗೆ ಅಂತರ್ಜಾಲ ಸೇವೆ : ಕೇಂದ್ರ ಸಚಿವ ತೋಮರ್‌

Published:
Updated:
1.10 ಲಕ್ಷ ಗ್ರಾಮಪಂಚಾಯಿತಿಗಳಿಗೆ ಅಂತರ್ಜಾಲ ಸೇವೆ : ಕೇಂದ್ರ ಸಚಿವ ತೋಮರ್‌

ನವದೆಹಲಿ: ‘ಭಾರತ್‌ನೆಟ್‌ ಯೋಜನೆ ಅಡಿ ಆಫ್ಟಿಕಲ್‌ ಫೈಬರ್‌ ಕೇಬಲ ಅಳವಡಿಸಿ ದೇಶದ 1.10 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಲೋಕಸಭೆಗೆ ಗುರುವಾರ ಮಾಹಿತಿ ನೀಡಿದರು. 

‘2018ರ ಜನವರಿ 21ರ ವೇಳೆಗೆ ಮೊದಲ ಹಂತದಲ್ಲಿ 1.10 ಲಕ್ಷ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2.58 ಲಕ್ಷ ಕಿ.ಮೀ. ಆಫ್ಟಿಕಲ್‌ ಫೈಬರ್‌ ಕೇಬಲ್‌ ಜಾಲ ಅಳವಡಿಸಿದ್ದೇವೆ. ಇವುಗಳಲ್ಲಿ 1.01 ಲಕ್ಷ ಪಂಚಾಯಿತಿಗಳಲ್ಲಿ ಅಂತರ್ಜಾಲ ಸೇವೆ ಲಭ್ಯವಿದೆ’ ಎಂದು ಸಚಿವರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಎರಡನೆ ಹಂತದಲ್ಲಿ 1.5 ಲಕ್ಷ ಪಂಚಾಯಿತಿಗಳಿಗೆ  ಈ ಸೇವೆ ಒದಗಿಸುವ ಗುರಿಯಿದೆ. ಇದರ ಕಾಮಗಾರಿ 2019 ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದು ಅವರು ತಿಳಿಸಿದರು.

‘ಈ ಸಂಪರ್ಕದಿಂದಾಗಿ ಹಣಕಾಸು, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಯೋಜನೆಗಳ ಲಾಭ ಜನರಿಗೆ ತ್ವರಿತವಾಗಿ ತಲುಪಲಿದೆ’ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry