ಬೀದಿ ಛಾಯಾಗ್ರಹಣವನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಆಲೋಚನೆ ಮೊದಲಿನಿಂದಲೂ ನನಗೆ ಇರಲಿಲ್ಲ. ಲ್ಯಾಂಡ್‌ಸ್ಕೇಪ್, ಸಿಟಿ ಹೀಗೆ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದೆ. ನಾನು ಮಾಡುತ್ತಿದ್ದ ಛಾಯಾಗ್ರಹಣ ನನ್ನೊಂದಿಗೆ ಅಷ್ಟಾಗಿ ಸಂವಹಿಸುತ್ತಿರಲಿಲ್ಲ. ಇದೇ ಕೊರಗು ನನ್ನನ್ನು ಕಾಡುತ್ತಿತ್ತು. ಒಮ್ಮೆ ನನ್ನ ಸ್ನೇಹಿತ ಬೀದಿ ಛಾಯಾಗ್ರಣದ ಕಾರ್ಯಾಗಾರಕ್ಕೆ ಕರೆದೊಯ್ದ. ಆಗ ಇದು ನನ್ನನ್ನು ಸೆಳೆಯಿತು. ನನ್ನೊಂದಿಗೆ ಸಂವಹನ ನಡೆಸಿತು. ನಂತರ ನನಗೆ ಇದು ಒಂದು ರೀತಿ ಗೀಳೇ ಆಯಿತು ಅನ್ನಿ.

ಬೇರೆ ಬಗೆಯ ಛಾಯಾಗ್ರಹಣಕ್ಕಿಂತ ಇದು ಭಿನ್ನ. ಒಂದೇ ಕ್ಷಣದಲ್ಲಿ ನಮಗೆ ಬೇಕಾದ ಚಿತ್ರ ಕೈತಪ್ಪಬಹುದು ಅಥವಾ ಒಳ್ಳೆಯ ಚಿತ್ರ ನಮ್ಮದಾಗಬಹುದು. ಛಾಯಾಗ್ರಾಹಕ ಸೂಕ್ಷ್ಮಜೀವಿಯಾಗಿರಬೇಕು ಜೊತೆಗೆ ಚುರುಕಿನವನಾಗಿರಬೇಕು. ಹೀಗಿದ್ದರೆ ಮಾತ್ರ ಒಂದೊಳ್ಳೆ ಚಿತ್ರ ನಮ್ಮದಾಗುತ್ತದೆ. ನನ್ನ ಹೆಚ್ಚಿನ ಛಾಯಾಚಿತ್ರಗಳ ವಿಷಯವಸ್ತು ಭಾರತದ ಸಂಸ್ಕೃತಿ, ಪರಂಪರೆಯೇ ಆಗಿರುತ್ತದೆ. ನನ್ನದು ಮಂಗಳೂರು, ನನಗೆ ಯಕ್ಷಗಾನ ಬಹಳ ಇಷ್ಟ. ನನ್ನ ಊರಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನೇ ನಾನು ಹೆಚ್ಚಾಗಿ ಸೆರೆಹಿಡಿಯುತ್ತೇನೆ.

ಬೀದಿ ಛಾಯಾಗ್ರಹಣ ಮಾಡುವುದರಿಂದ ಸಾರ್ವಜನಿಕರ ಖಾಸಗಿ ಬದುಕಿಗೆ ತೊಂದರೆಯಾಗುತ್ತದೆ ಎನ್ನುವ ಮಾತಿದೆ. ಆದರೆ, ಇದನ್ನು ನಾನು ಒಪ್ಪುವುದಿಲ್ಲ. ಸಾರ್ವಜನಿಕ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಅಂತರವಿದೆ ಅಲ್ವಾ. ತಮ್ಮ ಖಾಸಗಿ ನಡವಳಿಕೆಯನ್ನು ಸಾರ್ವಜನಿಕವಾಗಿ ಯಾರೂ ಮಾಡುವುದಿಲ್ಲ. ನಾವು ಯಾರದೇ ಮನೆಯೊಳಗೆ ಹೋಗಿ ಚಿತ್ರ ತೆಗೆಯುವುದಿಲ್ಲ. ಅಥವಾ ನಾವು ಯಾರದೊ ಮನೆಯ ಕಿಟಕಿ ಇಣುಕುವುದಿಲ್ಲ. ಸಾರ್ವಜನಿವಾಗಿ ನಡೆದುಕೊಳ್ಳುವುದೆಲ್ಲವೂ ಸಾರ್ವಜನಿಕವೇ ಆಗಿರುತ್ತದೆ. ಇದನ್ನೆ ನಾವು ಸೆರೆಹಿಡಿಯುತ್ತೇವೆ ಅಷ್ಟೆ. ಸುಬೋದ್ ಶೆಟ್ಟಿ

ಮೊದಲೇ ಹೇಳಿದ ಹಾಗೆ ಚಿತ್ರ ಸೆರೆಹಿಡಿಯಲು ಹೆಚ್ಚಿನ ಕಾಲಾವಕಾಶ ಇರುವುದಿಲ್ಲ. ಇದನ್ನು ಕ್ಷಣಾರ್ಧ ಛಾಯಾಗ್ರಹಣ ಎನ್ನಬಹುದು. ಒಂದು ದೃಶ್ಯ ನೋಡಿದೊಡನೆಯೇ ಇದು ನನ್ನ ಆಯ್ಕೆಯೋ ಇಲ್ಲವೋ, ಆಯ್ಕೆಯಾದರೆ ಯಾವ ಕೋನದಿಂದ (ಆ್ಯಂಗಲ್) ಸೆರೆಹಿಡಿಯಬೇಕು, ಇದರ ಚೌಕಟ್ಟು ಎಂಥದಿರಬೇಕು ಎಲ್ಲವನ್ನು ದೃಶ್ಯ ಘಟಿಸಿ ಮರೆಯಾಗುವುದರೊಳಗಾಗಿ ಯೋಚಿಸಿ ಚಿತ್ರ ತೆರೆಯಬೇಕಾಗುತ್ತದೆ. ಇದು ಕೇವಲ ಅನುಭವದಿಂದ ಜತೆಗೆ ನಮ್ಮ ತಪ್ಪುಗಳಿಂದಲೇ ಕಲಿಯಬೇಕಾದ ಪಾಠ. ಇನ್ನು ಛಾಯಾಗ್ರಹಣದಲ್ಲಿ ಮುಖ್ಯವಾಗಿರುವುದು ಬೆಳಕು. ಅದರ ಸಂಯೋಜನೆ ಕರಗತವಾದರೆ ಛಾಯಾಗ್ರಾಹಕ ಅರ್ಧ ಗೆದ್ದಂತೆ.

ಸದ್ಯ ನಾನು ನೆಲೆಸಿರುವುದು ದುಬೈನಲ್ಲಿ. ಬಾರತದಲ್ಲಿ ಹಲವೆಡೆ ಬೀದಿ ಛಾಯಾಗ್ರಹಣ ಮಾಡಿದ್ದೇನಾದರೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಚಿತ್ರ ಸೆರೆಹಿಡಿಯುತ್ತಿರುವುದು. ಈ ರೀತಿಯ ಛಾಯಾಗ್ರಹಣವನ್ನು ಮಾಡಲು ಇಚ್ಛಿಸುವವರು ಮೊದಲು ಸುತ್ತಾಡಬೇಕು. ಕೈಯಲ್ಲಿ ಕ್ಯಾಮೆರಾ ಹಿಡಿದು ಬೀದಿಬೀದಿ ಅಲೆಯಬೇಕು. ತಪ್ಪೋಒಪ್ಪೋ ಚಿತ್ರ ಸೆರೆಹಿಡಿಯುತ್ತಾ ಸಾಗಬೇಕು. ಈ ರೀತಿಯ ಛಾಯಾಗ್ರಹಣಕ್ಕೆ ಬರುವ ಮೊದಲು ಬೇರೆ ಎಲ್ಲಾ ವಿಧದ ಛಾಯಾಚಿತ್ರವನ್ನು ತೆರೆಯುವ ಅಭ್ಯಾಸ ಮಾಡಿಕೊಂಡಿದ್ದರೆ ಇದು ಬೇಗ ಕೈ ಹಿಡಿಯುತ್ತದೆ.

ಬೀದಿ ಸುತ್ತಿ ಫೋಟೊ ತೆಗೆಯೋ ಹುಚ್ಚು ಹಿಡಿಸಿಕೊಳ್ಳಿ. ನನ್ನಂತೆ ನಿಮ್ಮೊಡನೆಯೂ ಬೀದಿಗಳು ಮಾತಾಡ್ತವೆ.

–ಸುಬೋಧ್ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.