ನವಶಕ್ತಿ ದೇವತೆಗಳ ಉತ್ಸವ

7

ನವಶಕ್ತಿ ದೇವತೆಗಳ ಉತ್ಸವ

Published:
Updated:

ಬೆಂಗಳೂರು: ಯಲಹಂಕ ಕ್ಷೇತ್ರವ್ಯಾಪ್ತಿಯ ಅದ್ದೆ ವಿಶ್ವನಾಥಪುರದಲ್ಲಿ ನವಶಕ್ತಿ ದೇವತೆಗಳ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಗ್ರಾಮಸ್ಥರು ಸಪಲಮ್ಮ ದೇವಿಗೆ ಎಡೆಹಾಕಿ ಅದನ್ನು ಕೊಂಡೊಯ್ದು ಊರ ಹೊರಗೆ ಇಟ್ಟುಬಂದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಾಮೂಹಿಕ ಪೂಜೆ ನೆರವೇರಿಸಲಾಯಿತು.

ಗ್ರಾಮ ದೇವರುಗಳಾದ ಮುನೇಶ್ವರಸ್ವಾಮಿ, ಆಂಜನೇಯಸ್ವಾಮಿ, ಪೂಜ ಮ್ಮ, ವೀರಭದ್ರಸ್ವಾಮಿ, ತಿಮ್ಮರಾಯಸ್ವಾಮಿ ಹಾಗೂ ಹೊರಗಿನಿಂದ ತಂದಿದ್ದ ಸಪಲಮ್ಮ, ಅಣ್ಯಮ್ಮ, ಪಟಾಲಮ್ಮ, ಬಸವಣ್ಣದೇವರು ಹಾಗೂ ಕರಗದಮ್ಮ ದೇವರುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿ ತು. ಭಕ್ತರು ಹಣ್ಣು–ಕಾಯಿ ನೀಡಿ ಪೂಜೆ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಡೊಳ್ಳುಕುಣಿತ, ತಮಟೆ ಮತ್ತಿತರ ಜಾನಪದ ಕಲಾ ತಂಡಗಳ ಪ್ರದರ್ಶನ ಜನರಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry