ಸೋಮವಾರ, ಡಿಸೆಂಬರ್ 9, 2019
22 °C
ಕಚೇರಿ ಸಹೋದ್ಯೋಗಿಯೊಂದಿಗೆ ಸಂಬಂಧ

ಉಪಪ್ರಧಾನಿ ಪ್ರೇಯಸಿ ಗರ್ಭಿಣಿ!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉಪಪ್ರಧಾನಿ ಪ್ರೇಯಸಿ ಗರ್ಭಿಣಿ!

ಸಿಡ್ನಿ: ಆಸ್ಟ್ರೇಲಿಯಾದ ಉಪ ಪ್ರಧಾನಿ ಬಾರ್ನೆಬಿ ಜಾಯ್ಸ್‌ (50) ಅವರು ತನ್ನ ಕಚೇರಿಯ ಉದ್ಯೋಗಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು ಎನ್ನಲಾದ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಬಾರ್ನೆಬಿ ಜಾಯ್ಸ್‌ ಅವರ ಪ್ರೇಯಸಿ ಗರ್ಭವತಿಯಾಗಿರುವ ಚಿತ್ರವನ್ನು ಸಿಡ್ನಿಯ ‘ಡೈಲಿ ಟೆಲಿಗ್ರಾಫ್‌’ ತನ್ನ ಮುಖಪುಟದಲ್ಲಿ ಬುಧವಾರ ಪ್ರಕಟಿಸಿದೆ. ‘ಇದು ಖಾಸಗಿತನದ ಉಲ್ಲಂಘನೆ ಎಂದು ನ್ಯಾಷನಲ್‌ ಪಾರ್ಟಿ’ ನಾಯಕರು ಹೇಳಿದ್ದಾರೆ.

‘ಈ ಕುರಿತು ಸಾರ್ವಜನಿಕವಾಗಿ ಚರ್ಚಿಸುವುದು ಸರಿಯಲ್ಲ. ಇದು ಸರಿ ಎಂದು ನಾನು ಭಾವಿಸುವುದಿಲ್ಲ. ಯಾವ ರಾಜಕಾರಣಿಗೂ ಇದು ಸರಿ ಎನಿಸದಿರಬಹುದು’ ಎಂದು ಬಾರ್ನೆಬಿ ಜಾಯ್ಸ್‌ ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಿಂದ ನನ್ನ ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಆಸ್ಟ್ರೇಲಿಯಾ ಉಪಪ್ರಧಾನಿ ಪತ್ನಿ ಜಾಯ್ಸ್ ಹೇಳಿಕೆ

ಪ್ರತಿಕ್ರಿಯಿಸಿ (+)