ಹೊಂಡ ಮುಚ್ಚಲು ಆಗ್ರಹ: ವಿವಿಧೆಡೆ ರಸ್ತೆ ತಡೆ

7

ಹೊಂಡ ಮುಚ್ಚಲು ಆಗ್ರಹ: ವಿವಿಧೆಡೆ ರಸ್ತೆ ತಡೆ

Published:
Updated:

ಬದಿಯಡ್ಕ: ಉಕ್ಕಿನಡ್ಕದಿಂದ ಅಡ್ಕಸ್ಥಳದವರಗೆ ರಸ್ತೆಯ ಹೊಂಡಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ನಾಗರಿಕರು ಗುರುವಾರ ಮತ್ತೆ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ವಾಹನ ಸಂಚಾರ ಮೊಟಕುಗೊಂಡಿದೆ. ಖಾಸಗಿ ವಾಹನಗಳು ಹಾಗೂ ಶಾಲಾ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಇಡಿಯಡ್ಕ, ಪೆರ್ಲ, ಬಜಕೂಡ್ಲು ಜಂಕ್ಷನ್, ಅಡ್ಕಸ್ಥಳದಲ್ಲಿ ನಾಗರಿಕರು ರಸ್ತೆ ತಡೆ ನಿರ್ಮಿಸಿದ್ದು, ಲೋಕೋಪಯೋಗಿ ಇಲಾಖೆಗಳ ಭರವಸೆ ದೊರೆತಲ್ಲಿ ಮಾತ್ರ ಮುಷ್ಕರ ನಿಲ್ಲಿಸುತ್ತೇವೆ. ಆದರೆ ಕಾಮಗಾರಿಯ ಆರಂಭದ ಬಗ್ಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ನಿಖರವಾಗಿ ತಿಳಿಸುತ್ತಿಲ್ಲ ಎಂದು ಆರೋಪಿದರು.

ಪ್ರಕರಣ ದಾಖಲು: ಉಕ್ಕಿನಡ್ಕದಿಂದ ಅಡ್ಕಸ್ಥಳದ ತನಕದ ರಸ್ತೆ ತಡೆ ಮಾಡಿದ ಸುಮಾರು 80 ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೆರ್ಲದಲ್ಲಿ ಪ್ರತಿಭಟನೆಗೆ ನೇತೃತ್ವ ನೀಡಿದ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್, ಮಾಜಿ ಅಧ್ಯಕ್ಷ ಸೋಮಶೇಖರ ಜೆ.ಎಸ್, ಮುಖಂಡರಾದ ವಿನೋದ್ ಕಾಟುಕುಕ್ಕೆ, ಸಾದಿಕ್, ನಾರಾಯಣ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry