ಸೋಮವಾರ, ಡಿಸೆಂಬರ್ 9, 2019
22 °C

‘ಕೇಂದ್ರ ರಸ್ತೆ ನಿಧಿಯಡಿ ₹22.50 ಕೋಟಿ ಬಿಡುಗಡೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೇಂದ್ರ ರಸ್ತೆ ನಿಧಿಯಡಿ ₹22.50 ಕೋಟಿ ಬಿಡುಗಡೆ’

ಮಂಗಳೂರು: ಕೇಂದ್ರ ರಸ್ತೆ ನಿಧಿಯಡಿ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ₹22.50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಬದನಾಜೆ ಕುಂಡಡ್ಕ ಮೂಲಕ ಪರಿಯಾಲ್ತಡ್ಕವನ್ನು ಸಂಪರ್ಕಿಸುವ 10 ಕಿ.ಮೀ. ರಸ್ತೆ ವಿಸ್ತಾರ ಹಾಗೂ ಅಭಿವೃದ್ಧಿಗೆ ₹10 ಕೋಟಿ, ಪುತ್ತೂರು ತಾಲ್ಲೂಕು ಬಡಗನ್ನೂರು ಗ್ರಾಮದ ಮುಡಿಪಿನಡ್ಕದಿಂದ ಮೈಂದಿನಡ್ಕ ಮೂಲಕ ಸುಳ್ಯಪದವುವರೆಗಿನ ರಸ್ತೆ ಅಭಿವೃದ್ಧಿಗೆ ₹5.50 ಕೋಟಿ, ಮಂಗಳೂರಿನ ಜಪ್ಪಿನಮೊಗರುದಿಂದ (ರಾ.ಹೆ-75ರಲ್ಲಿ) ಬಜಾಲ್‌ವರೆಗಿನ ರಸ್ತೆ ಅಭಿವೃದ್ಧಿಗೆ ₹3 ಕೋಟಿ, ಕಂಕನಾಡಿಯಿಂದ ಪಂಪ್‌ವೆಲ್ ವೃತ್ತದವರೆಗಿನ ಬೈಪಾಸ್ ರಸ್ತೆ ಅಭಿವೃದ್ಧಿಗೆ ₹4 ಕೋಟಿ ಸೇರಿದಂತೆ 4 ರಸ್ತೆಗಳ ಅಭಿವೃದ್ಧಿಗೆ ಒಟ್ಟು ₹22.50 ಕೋಟಿ ಅನುದಾನ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.

ಇದಲ್ಲದೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡತೋಟ-ಮರ್ಕಂಜ ರಸ್ತೆ ಅಭಿವೃದ್ಧಿ ₹6 ಕೋಟಿ, ದೊಡ್ಡತೋಟ-ಕುಕ್ಕುಜಡ್ಕ-ಪಜಪಲ್ಲ ರಸ್ತೆ ಅಭಿವೃದ್ಧಿಗೆ 4 ಕೋಟಿ, ಗುತ್ತಿಗಾರು-ಬಳ್ಳಕ್ಕ-ಪಂಜ ರಸ್ತೆ ಅಭಿವೃದ್ಧಿಗೆ 4 ಕೋಟಿ, ಮಾಡಾವು-ಪುಣ್ಚಪ್ಪಾಡಿ-ಸವಣೂರು ರಸ್ತೆ ಅಭಿವೃದ್ಧಿಗೆ ₹3 ಕೋಟಿ), ಮಾಡಾವು-ಕೊಳ್ತಿಗೆ ರಸ್ತೆ ಅಭಿವೃದ್ಧಿಗೆ 2 ಕೋಟಿ, ಗುತ್ತಿಗಾರು-ಕಂದ್ರಪ್ಪಾಡಿ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ₹4 ಕೋಟಿ, ಗುತ್ತಿಗಾರು-ಬಳ್ಪ ರಸ್ತೆ ಅಭಿವೃದ್ಧಿಗೆ ₹3 ಕೋಟಿ, ಎಡಮಂಗಲ-ಪುಳಿಕುಕ್ಕು ರಸ್ತೆ ಅಭಿವೃದ್ಧಿಗೆ ₹3 ಕೋಟಿ, ಅಂಕತಡ್ಕ-ಮಂಜುನಾಥನಗರ ರಸ್ತೆ ಅಭಿವೃದ್ಧಿಗೆ ₹2 ಕೋಟಿ, ಪೆರುವಾಜೆ-ಬೆಳಂದೂರು ರಸ್ತೆಗೆ ₹3 ಕೋಟಿ, ಗೋಳಿತ್ತಡಿ-ಏನಿತ್ತಡ್ಕ ರಸ್ತೆ ಅಭಿವೃದ್ಧಿಗೆ 2 ಕೋಟಿ, ನೆಹರುತೋಟ-ವಳಕಡಮ ರಸ್ತೆಗೆ ₹3 ಕೋಟಿ, ಐವರನಾಡು-ದೇರಾಜೆ ರಸ್ತೆ ಅಭಿವೃದ್ಧಿಗೆ ₹3 ಕೋಟಿ, ಸುಂಕದಕಟ್ಟೆ-ಕೊಂಬಾರು-ಕೆಂಜಾಳ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿಗೆ ₹3 ಕೋಟಿ ಸೇರಿದಂತೆ 15 ರಸ್ತೆಗಳ ಅಭಿವೃದ್ಧಿಗೆ ಒಟ್ಟು ₹50 ಕೋಟಿ ಅನುದಾನವನ್ನು ಮುಂದಿನ ಹಂತದಲ್ಲಿ ಬಿಡುಗಡೆ ಮಾಡಲು ಸಚಿವರು ಒಪ್ಪಿರುವುದಾಗಿ ನಳಿನ್‌ಕುಮಾರ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)