ಸೋಮವಾರ, ಮೇ 25, 2020
27 °C

ಎಸ್‌ಬಿಐ: ₹20 ಸಾವಿರ ಕೋಟಿ ಸಾಲ ವಜಾ

ಪಿಟಿಐ Updated:

ಅಕ್ಷರ ಗಾತ್ರ : | |

ಎಸ್‌ಬಿಐ: ₹ 20 ಸಾವಿರ ಕೋಟಿ ಸಾಲ ವಜಾ

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, 2016–17ರಲ್ಲಿ ವಸೂಲಾಗದ ₹ 20,339 ಕೋಟಿ ಸಾಲದ ಮೊತ್ತವನ್ನು ವಜಾ ಮಾಡಿದೆ.

ಈ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಒಟ್ಟಾರೆ ₹ 81,683 ಕೋಟಿಗಳಷ್ಟು ಮೊತ್ತದ ಸಾಲವನ್ನು ವಜಾ ಮಾಡಿವೆ. ಇದರಲ್ಲಿ ಎಸ್‌ಬಿಐನ ಪಾಲು ಗರಿಷ್ಠ ಮಟ್ಟದಲ್ಲಿ ಇದೆ. ಎಸ್‌ಬಿಐ ವಜಾ ಮಾಡಿದ ಸಾಲದ ಮೊತ್ತವು ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನಕ್ಕೂ ಮುಂಚಿನ ಅವಧಿಗೆ ಸೇರಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2012–13ರಲ್ಲಿ ಒಟ್ಟಾರೆ ₹ 27,231 ಕೋಟಿ ಮೊತ್ತದ ಸಾಲ ವಜಾ ಮಾಡಿದ್ದವು. ಐದು ವರ್ಷಗಳಲ್ಲಿ ಈ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ.

ಎಸ್‌ಬಿಐ ನಂತರದ ಸ್ಥಾನದಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(₹ 9,205 ಕೋಟಿ), ಬ್ಯಾಂಕ್‌ ಆಫ್‌ ಇಂಡಿಯಾ (₹ 7,346 ಕೋಟಿ), ಕೆನರಾ ಬ್ಯಾಂಕ್ (₹ 5,545 ಕೋಟಿ) ಮತ್ತು ಬ್ಯಾಂಕ್‌ ಆಫ್‌ ಬರೋಡಾ (₹ 4,348 ಕೋಟಿ) ಇವೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಬ್ಯಾಂಕ್‌ಗಳು ₹ 53,625 ಕೋಟಿ ಮೊತ್ತದ ಸಾಲ ವಜಾ ಮಾಡಿವೆ.

ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳ ಪೈಕಿ 9 ಬ್ಯಾಂಕ್‌ಗಳ ಒಟ್ಟು ಎನ್‌ಪಿಎ 2017ರ ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಬ್ಯಾಂಕ್‌ಗಳು ಅದುವರೆಗೂ ಮಂಜೂರು ಮಾಡಿರುವ ಸಾಲದ ಒಟ್ಟು ಮೊತ್ತದ ಶೇ 15ರಷ್ಟು ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.