ಕಾವ್ಯಾನಂದ ಪುರಸ್ಕಾರ ಪ್ರದಾನ

7

ಕಾವ್ಯಾನಂದ ಪುರಸ್ಕಾರ ಪ್ರದಾನ

Published:
Updated:
ಕಾವ್ಯಾನಂದ ಪುರಸ್ಕಾರ ಪ್ರದಾನ

ಬೆಂಗಳೂರು: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ ವತಿಯಿಂದ ‘ಕಾವ್ಯಾನಂದ ಪುರಸ್ಕಾರ’ವನ್ನು ವಿದ್ವಾಂಸ ಡಾ.ಹಿ.ಚಿ. ಬೋರಲಿಂಗಯ್ಯ ಅವರಿಗೆ ಪ್ರದಾನ ಮಾಡಲಾಯಿತು.

‘ಕನ್ನಡ ಪ್ರಮುಖ ಕವಿಗಳಲ್ಲಿ ಒಬ್ಬರಾದ ಸಿದ್ದಯ್ಯ ಪುರಾಣಿಕರ ಹೆಸರಿನ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ’ ಎಂದು ಬೋರಲಿಂಗಯ್ಯ ತಿಳಿಸಿದರು.

ವಿದ್ವಾಂಸ ಡಾ.ಕೆ.ಚಿನ್ನಪ್ಪ ಗೌಡ, ‘ಇಂದು ಏಕರೂಪಿ ಸಂಸ್ಕೃತಿ ನಿರ್ಮಾಣವಾಗುತ್ತಿದ್ದು, ಇದು ಜನಪದ ಸಾಹಿತ್ಯಕ್ಕೆ ಮಾರಕವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಟ್ರಸ್ಟ್ ಅಧ್ಯಕ್ಷ ವಿಜಯಾ ನಂದೀಶ್ವರ್‌ ಮಾತನಾಡಿದರು. ಪ್ರಶಸ್ತಿ ₹25 ಸಾವಿರ ನಗದು ಹಾಗೂ ಫಲಕವನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry