ಶುಕ್ರವಾರ, ಡಿಸೆಂಬರ್ 13, 2019
27 °C

ಇವರೂ ಕಣ್ಣು ಹೊಡೆದಿದ್ದರು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವರೂ ಕಣ್ಣು ಹೊಡೆದಿದ್ದರು..

ಪ್ರಿಯಾ ಪ್ರಕಾಶ್‌ ವಾರಿಯರ್‌ ಎಂಬ ಹುಡುಗಿ ತೆರೆಯಲ್ಲಿ ರೊಮ್ಯಾನ್ಸ್‌ ಮಾಡುತ್ತಾ ಕಣ್ಣು ಮಿಟುಕಿಸಿದ್ದಕ್ಕೆ ಜನಸಾಮಾನ್ಯರೂ ರೋಮಾಂಚನಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈಗ ಕಣ್ಣು ಮಿಟುಕಿಸಿದ ಸೆಲೆಬ್ರಿಟಿಗಳ ಚಿತ್ರಗಳೇ ತುಂಬಿಕೊಂಡಿವೆ. ಪ್ರಿಯಾ ಈಗ ಎಲ್ಲರಿಗೂ ‘ಮಾಣಿಕ್ಯದಂಥ ಹೂವು’. ಇನ್‌ಸ್ಟಾಗ್ರಾಂನಲ್ಲಿದ್ದ ಅಂತಹ ಕೆಲವು ‘ಹೂವು’ಗಳನ್ನು ನೀವೂ ನೋಡಿ...

ಶ್ರದ್ಧಾ ಕಪೂರ್‌, 2014ರ ಮಾರ್ಚ್‌ನಲ್ಲಿ ತಮ್ಮ 26ನೇ ಹುಟ್ಟುಹಬ್ಬ ಆಚರಿಸಿಕೊಂಡದ್ದು ‘ಎಬಿಸಿಡಿ 2’ ಚಿತ್ರೀಕರಣದ ಸೆಟ್‌ನಲ್ಲಿ. ಕೇಕ್‌ ಕತ್ತರಿಸಿ ಮೊದಲ ತುತ್ತು ಬಾಯಿಗಿಟ್ಟ, ಚಿತ್ರದ ನಾಯಕ ವರುಣ್‌ ಧವನ್‌ ಕೇಕ್‌ನ ಕ್ರೀಮನ್ನೆಲ್ಲಾ ಶ್ರದ್ಧಾ ಮುಖಕ್ಕೆ ಹಚ್ಚಿ ಸಿಂಗಾರ ಮಾಡಿದ್ದರು. ಆಗ ತೆಗೆದ ಚಿತ್ರ ಇಲ್ಲಿದೆ ನೋಡಿ.

ಶ್ರದ್ಧಾ ಕಪೂರ್‌

‘ಬದ್ಲಾಪುರ್‌’ ಚಿತ್ರದಲ್ಲಿ ನೋಡುಗರ ಮೈಬಿಸಿಯೇರುವಂತೆ ನಟಿಸಿದ ಜೋಡಿ ವರುಣ್‌ ಧವನ್‌ ಮತ್ತು ಯಾಮಿ ಗೌತಮ್‌. ಅದೇ ಚಿತ್ರದ ಚಿತ್ರೀಕರಣದ ವೇಳೆ ಅವರ ಓಡಾಟ, ಡೇಟಿಂಗ್‌ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಡಿದ್ದವು. ಹಾಗೊಂದು ಸುತ್ತಾಟದ ವೇಳೆ ಯಾಮಿ ಜೊತೆಗೆ ತಮ್ಮ ವಿಲಾಸಿ ಕಾರಿನಲ್ಲಿ ವರುಣ್‌ ತೆಗೆದುಕೊಂಡ ಸೆಲ್ಫಿ ಹೀಗಿತ್ತು ಎಂದು ಇನ್‌ಸ್ಟಾಗ್ರಾಂ ನೆನಪಿಸಿದೆ.

ಕತ್ರಿನಾ ಕೈಫ್‌

1998ರಲ್ಲಿ ಬಿಡುಗಡೆಯಾದ ‘ಪ್ಯಾರ್‌ ಕಿಯಾ ತೊ ಡರ್‌ನಾ ಕ್ಯಾ’ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಮತ್ತು ಕಾಜೋಲ್‌ ಅವರ ಪ್ರೀತಿ ಪ್ರೇಮ ಪ್ರಣಯದ ಜೊತೆಗೆ ಇಬ್ಬರೂ ಕಣ್ಣು ಮಿಟುಕಿಸಿಕೊಳ್ಳುವ ದೃಶ್ಯಗಳು ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿತ್ತು. ಆ ದೃಶ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ... ಬಳುಕುವ ಸುಂದರಿ ಕತ್ರಿನಾ ಕೈಫ್‌ ಮಾದಕ ತುಟಿಗಳ ಮೇಲೆ ನಾಲಿಗೆ ಸವರುತ್ತಾ ಕಣ್ಣು ಮಿಟುಕಿಸಿರುವ ಫೋಟೊ ಇನ್‌ಸ್ಟಾಗ್ರಾಂನಲ್ಲಿದೆ.

ಅಲಿಯಾ ಭಟ್‌

‘ಹುಡುಗಿಯರೇ ವಾ‍ಪಸ್‌ ಕೊಡಿ’ ಎಂಬರ್ಥದಲ್ಲಿ ‘ಗರ್ಲ್ಸ್‌ ಬೈಟ್‌ ಬ್ಯಾಕ್‌’ ಎಂಬ ಬಿಳಿ ಅಕ್ಷರಗಳು ಅನುಷ್ಕಾ ಶರ್ಮಾ ಧರಿಸಿದ ಮರೂನ್‌ ಪೋಲೊದಲ್ಲಿ ಎದ್ದುಕಾಣುತ್ತಿದೆ. ‘ವಾಪಸ್‌ ಕೊಡೋದು ಹೇಗೆ’ ಎಂದು ಕೇಳುವ ಅಗತ್ಯವೇ ಇಲ್ಲ. ಹೀಗೆ ಎಂದು ಕಣ್ಣು ಮಿಟುಕಿಸಿ ತೋರಿಸಿದ್ದಾರೆ ಅನುಷ್ಕಾ. ಇದು ಹಳೆಯ ಚಿತ್ರ. ಶಾಹಿದ್‌ ಕಪೂರ್‌ ಈಗ ‘ಪದ್ಮಾವತ್‌’ ಚಿತ್ರದ ಪಾತ್ರದಿಂದಾಗಿ ಸುದ್ದಿಯಲ್ಲಿರಬಹುದು. ಆದರೆ ಅದಕ್ಕೂ ಮುಂಚೆ ಅವರು ಇನ್‌ಸ್ಟಾಗ್ರಾಂಗೆ ಒಂದು ಸೆಲ್ಫಿ ಅಪ್‌ಲೋಡ್‌ ಮಾಡಿದ್ದರು. ಕುರುಚಲು ಗಡ್ಡದ ಶಾಹಿದ್‌ ಸಾದಾ ಮೂಡ್‌ನಲ್ಲೇ ಕಣ್ಣು ಮಿಟುಕಿಸಿರುವ ಫೋಟೊ ಅದು.

ಶಾಹಿದ್‌ ಕಪೂರ್‌

ಆಲಿಯಾ ಭಟ್‌ ಅಭಿಮಾನಿಗಳು ಬಹುವಾಗಿ ಮೆಚ್ಚಿದ ಈ ಫೋಟೊವನ್ನು ಪಡ್ಡೆ ಹುಡುಗರಂತೂ ‘ಆಲಿಯಾ ನನಗೆ ಕಣ್ಣು ಹೊಡೆದಿದ್ದಾಳೆ ಎಂದು ಸಂಭ್ರಮಿಸಿಕೊಂಡಿದ್ದರು. ನೋಡಿದ್ರಲ್ಲಾ? ಒಬ್ಬ ಪ್ರಿಯಾ ಪ್ರಕಾಶ್‌ ಕಣ್ಣು ಹೊಡೆದಾಗ ಮೂಡಿದ ಸಂಚಲನ ಹೇಗಿದೆ?

ಪ್ರತಿಕ್ರಿಯಿಸಿ (+)