ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರು ಹಿಟ್ಲರ್‌ ಧೋರಣೆ ಬಿಡಲಿ

Last Updated 19 ಫೆಬ್ರುವರಿ 2018, 9:08 IST
ಅಕ್ಷರ ಗಾತ್ರ

ಗೌರಿಬಿದನೂರು: ಬಿಜೆಪಿಯವರು ನೂರು ಸುಳ್ಳು ಹೇಳಿ ಕೇವಲ ಒಂದು ನಿಜ ಮಾಡುವ ನೀತಿಯೊಂದಿಗಿನ ಹಿಟ್ಲರ್‌ ಧೋರಣೆ ಮೊದಲು ಬಿಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಹೆಳಿದರು.

ಪಟ್ಟಣದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿಯಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪಡೆಯಲು ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಇದು 21ನೇ ಶತಮಾನದ 125 ಕೋಟಿ ಜನರಿರುವ ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕವಾದ ರಾಷ್ಟ್ರವಾಗಿದೆ. ಬಿಜೆಪಿಯವರಂತೆ 5 ವರ್ಷಗಳ ಸಂಪೂರ್ಣ ಅಧಿಕಾರವನ್ನು ರಾಜ್ಯದಲ್ಲಿ ಪೂರೈಸದೇ ಅರ್ಧದಲ್ಲೆ ಜೈಲಿಗೆ ಹೋಗಿ ಬರುವ ಸಂಸ್ಕೃತಿ ನಮ್ಮದಲ್ಲ ಎಂದು
ಟೀಕಿಸಿದರು.

ರಾಜ್ಯದಲ್ಲಿ ಕಳೆದ ಐದು ವರ್ಷದಿಂದ ಕಾಂಗ್ರೆಸ್ ಸರ್ಕಾರ ಮಾಡಿದ ಮಹತ್ತರ ಅಭಿವೃದ್ಧಿ ಕಾರ್ಯಗಳಿಂದ ಜನರ ಎದುರು ಧೈರ್ಯದಿಂದ ನಿಷ್ಪಕ್ಷಪಾತವಾಗಿ ಮಾತನಾಡಲು ಸಾಧ್ಯವಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚುನಾವಣಾ ವೀಕ್ಷಕ ಐ.ಜಿ.ಸನಾದಿ ಹೇಳಿದರು.

ದೇಶದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಿವೆ. ಆದರೂ ಅವೆಲ್ಲದರ ಬಗ್ಗೆ ಪ್ರಶ್ನಿಸದ ಬಿಜೆಪಿ ರಾಜ್ಯದಲ್ಲಿ ಮಾತ್ರ ಭ್ರಷ್ಟತೆ ಅಡಗಿದೆ ಎಂದು
ಹೇಳುತ್ತಿದೆ, ಹೊರತು ಇದುವರೆಗೂ ಸಾಬೀತು ಪಡಿಸಿಲ್ಲ. ತಮ್ಮ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಅರ್ಹ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲರೂ ಒಮ್ಮತದಿಂದ ನೀಡಬೇಕಾಗಿದೆ ಎಂದು ಹೇಳಿದರು.

ವೀಕ್ಷಕರು ತಿಳಿಸಿದಂತೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವವರು ಹೆಸರನ್ನು ನೀಡಿ ಎಂದಾಗ ನೆರೆದಿದ್ದ ಎಲ್ಲ ಕಾರ್ಯಕರ್ತರು ಒಮ್ಮತದಿಂದ ನಮ್ಮೆಲ್ಲರ ಆಯ್ಕೆ ಒಂದೇ ಅದು ಎನ್.ಎಚ್.ಶಿವಶಂಕರರೆಡ್ಡಿ ಎಂಬುದನ್ನು ಕೈ ಮೇಲೆತ್ತುವ ಮೂಲಕ ಸಾಬೀತು ಪಡಿಸಿದರು.

ವಿಧಾನಸಭಾ ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ತಾಲ್ಲೂಕಿನ ಜನರು ನನ್ನ ಮೇಲಿಟ್ಟಿರುವ ವಿಶ್ವಾಸ ಹಾಗೂ ಕಾರ್ಯಕರ್ತರ ಪ್ರಾಮಾಣಿಕ ಶ್ರಮದಿಂದ ಕಳೆದ ನಾಲ್ಕು ಬಾರಿ ಶಾಸಕರಾಗಲು ಸಾಧ್ಯವಾಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ತಾಲ್ಲೂಕಿನಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ದಿ ಕಾರ್ಯ ಮಾಡಲು ಸಹಕಾರಿಯಾಗಿದೆ. ಮುಂದಿನ ಚುನಾವಣೆಯಲ್ಲಿಯೂ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು
ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಹಿಳಾ ಅಧ್ಯಕ್ಷೆ ಗೀತಾಜಯಂದರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಚಿಕ್ಕೇಗೌಡ, ನಗರಸಭೆ ಅಧ್ಯಕ್ಷ ಕಲೀಂ ಉಲ್ಲಾ, ಉಪಾಧ್ಯಕ್ಷ ಆರ್.ಪಿ.ಗೋಪಿನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ವಿ.ಮಂಜುನಾಥ್, ಡಿ.ನರಸಿಂಹಮೂರ್ತಿ, ಅರುಂಧತಿ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷರಾದ ಎಂ.ನರಸಿಂಹಮೂರ್ತಿ ಮತ್ತು ಅಬ್ದುಲ್ಲಾ, ಕಾರ್ಯದರ್ಶಿ ವೆಂಕಟರಮಣ, ಮುಖಂಡರಾದ ಅಶ್ವತ್ಥ ನಾರಾಯಣಗೌಡ, ಎಚ್.ಎನ್.ಪ್ರಕಾಶರೆಡ್ಡಿ, ಕೆ.ಎನ್.ನಂಜುಂಡಗೌಡ, ವಿ.ಪಿ.ನಾರಾಯಣಗೌಡ, ಹನುಮಂತರೆಡ್ಡಿ, ರಾಘವೇಂದ್ರಗುಪ್ತ, ಎನ್.ಆರ್.ರಾಧಾಕೃಷ್ಣ ಗುಪ್ತ, ಬಿ.ಆರ್.ಶ್ರೀನಿವಾಸ ಮೂರ್ತಿ, ಅಮ್ಮ ಹುಸೇನ್, ಮೌಸಿನ್ ರಜಾ, ನಾನಾ ಸಾಬ್, ಚಿನ್ನಪ್ಪಯ್ಯ, ರಾಘವೇಂದ್ರ ಹನುಮಾನ್, ಇಡಗೂರು ಸೋಮಯ್ಯ, ಬೊಮ್ಮಣ್ಣ, ಸುಮನಾ, ರೇಣುಕಾ, ಕೃಷ್ಣಕುಮಾರಿ, ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT