ಲಿಂಗತ್ವ ಅಸಮಾನತೆ ಕೊನೆ: ಕೆನಡಾ ಪ್ರಧಾನಿ ಪತ್ನಿ ಸೋಫಿ ಕರೆ

7

ಲಿಂಗತ್ವ ಅಸಮಾನತೆ ಕೊನೆ: ಕೆನಡಾ ಪ್ರಧಾನಿ ಪತ್ನಿ ಸೋಫಿ ಕರೆ

Published:
Updated:
ಲಿಂಗತ್ವ ಅಸಮಾನತೆ ಕೊನೆ: ಕೆನಡಾ ಪ್ರಧಾನಿ ಪತ್ನಿ ಸೋಫಿ ಕರೆ

ಮುಂಬೈ: ಲಿಂಗ ಅಸಮಾನತೆಯನ್ನು ಕೊನೆಗಾಣಿಸಬೇಕಿದೆ ಎಂದು ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹೆಂಡತಿ ಸೋಫಿ ಗ್ರಗೋರಿ ಅವರು ಕರೆ ನೀಡಿದ್ದಾರೆ.

ಪುರುಷ–ಮಹಿಳೆಯರ ನಡುವಿನ ತಾರತಮ್ಯದಿಂದ ಜಗತ್ತು ಸಾಕಷ್ಟು ಕಷ್ಟಗಳನ್ನು ಎದುರಿಸಿದೆ ಎಂದಿದ್ದಾರೆ.

ಜಗತ್ತಿನಿಂದ ಈ ತಾರತಮ್ಯವನ್ನು ಹೋಗಲಾಡಿಸಲು ಸಮಾಜದ ಎಲ್ಲರೂ ಜೊತೆಯಾಗಿ ನಿಲ್ಲಬೇಕಿದೆ ಎಂದು ಸೋಫಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಸೋಫಿಯಾ ಕಾಲೇಜಿನ ಸಮಾರಂಭವೊಂದರಲ್ಲಿ ಅವರು ಮಂಗಳವಾರ ಮಾತನಾಡಿದರು.

ಹುಡುಗಿಯರಿಗಿಂತ ಹುಡುಗರು ಮೇಲು ಎಂಬುದು ಕೆಲವರ ತಪ್ಪು ನಂಬಿಕೆಯಾಗಿದ್ದು, ಇದು ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

‘ಲಿಂತ ಸಮಾನತೆಗಾಗಿ ಹೋರಾಡುವುದು ಎಂದರೆ ಒಂದು ಲಿಂಗದವರನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುವುದು ಎಂದಲ್ಲ. ಮಹಿಳೆಯರು ಎದುರಿಸಿದ ತಾರತಮ್ಯದ ವಿರುದ್ಧ ಅವರೇ ದನಿ ಎತ್ತಬೇಕು. ಸತ್ಯವನ್ನು ಬಿಚ್ಚಿಡಬೇಕು. ಇದಕ್ಕಾಗಿ ಒಗ್ಗಟ್ಟಾಗಬೇಕು. ಪರಸ್ಪರ ಸಹಾಯ ಮಾಡಬೇಕು. ಆಗ ಯತ್ನ ಫಲಪ್ರದವಾಗುತ್ತದೆ’ ಎಂದು ಅವರು ಮಹಿಳೆಯರಿಗೆ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry