ಉತ್ತರಪ್ರದೇಶ ಉಪಚುನಾವಣೆ: ಜೈಲಿನಿಂದಲೇ ಡಾನ್‌ ಸ್ಪರ್ಧೆ

7

ಉತ್ತರಪ್ರದೇಶ ಉಪಚುನಾವಣೆ: ಜೈಲಿನಿಂದಲೇ ಡಾನ್‌ ಸ್ಪರ್ಧೆ

Published:
Updated:

ಲಖನೌ: ಮಾರ್ಚ್‌ 11ರಂದು ನಡೆಯಲಿರುವ ಫುಲ್‌ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಜೈಲಿನಲ್ಲಿರುವ ಪಾತಕಿ ಆತಿಖ್‌ ಅಹಮದ್‌ ಸ್ಪರ್ಧಿಸುತ್ತಿದ್ದಾನೆ.

ಕೆಲವು ವರ್ಷಗಳ ಹಿಂದೆ ಅಲಹಾಬಾದ್‌ನಲ್ಲಿ ಬಿಎಸ್‌ಪಿ ಮುಖಂಡ ರಾಜುಪಾಲ್‌ ಅವರನ್ನು ಕೊಲೆಗೈದ ಆರೋಪದಲ್ಲಿ ಡಿಯೋರಿಯ ಜಿಲ್ಲೆಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಸ್ವತಂತ್ರ ಅಭ್ಯರ್ಥಿಯಾಗಿ ಆತಿಖ್‌ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾನೆ.

ಈತನ ವಕೀಲರು ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ಮೇಲೆ ಕೊಲೆ, ಅಪಹರಣ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. 2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry