ಮಠಾಧೀಶರೊಂದಿಗೆ ಅಮಿತ್‌ ಶಾ ಸಭೆ

7

ಮಠಾಧೀಶರೊಂದಿಗೆ ಅಮಿತ್‌ ಶಾ ಸಭೆ

Published:
Updated:
ಮಠಾಧೀಶರೊಂದಿಗೆ ಅಮಿತ್‌ ಶಾ ಸಭೆ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮಠಗಳ ಸ್ವಾಮೀಜಿಗಳೊಂದಿಗೆ ಮಂಗಳವಾರ ರಾತ್ರಿ ಇಲ್ಲಿ ಸಭೆ ನಡೆಸಿದರು. ಸುಮಾರು 45 ನಿಮಿಷ ನಡೆದ ಸಭೆಯಲ್ಲಿ ಬಿಜೆಪಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ‘ಮಹದಾಯಿ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಿ. ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಬೇಕು. ಒಂದುವೇಳೆ ಕಾಂಗ್ರೆಸ್‌ ಸಹಕಾರ ನೀಡದಿದ್ದರೆ ಅದು ಅವರ ದೋಷವಾಗುತ್ತದೆ.

ಎಲ್ಲ ಧರ್ಮಗಳನ್ನು ಒಂದೇ ರೀತಿ ನೋಡಬೇಕು. ಅಲ್ಪಸಂಖ್ಯಾತರಿಗೆ ಒಂದು ಬಹು ಸಂಖ್ಯಾತರಿಗೆ ಒಂದೆಂಬಂತೆ ವ್ಯತ್ಯಾಸ ಮಾಡಬಾರದು. ಮಠಗಳನ್ನು ನಿಯಂತ್ರಣ ಮುಂತಾದ ಯೋಜನೆ ಹೀಗೆ ಯಾವುದೇ ವಿಷಯದಲ್ಲಿಯೂ ತಾರತಮ್ಯ ಇರಬಾರದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry