3 ಗಂಟೆ ಅವಧಿಯ ಶಸ್ತ್ರ ಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ ಹೊರತೆಗೆದಿದ್ದು 80 ಕೆಜಿ ಪಾಲಿಥೀನ್ !

7

3 ಗಂಟೆ ಅವಧಿಯ ಶಸ್ತ್ರ ಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ ಹೊರತೆಗೆದಿದ್ದು 80 ಕೆಜಿ ಪಾಲಿಥೀನ್ !

Published:
Updated:
3 ಗಂಟೆ ಅವಧಿಯ ಶಸ್ತ್ರ ಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯಿಂದ ಹೊರತೆಗೆದಿದ್ದು 80 ಕೆಜಿ ಪಾಲಿಥೀನ್ !

ಪಟನಾ: ಬಿಹಾರದ ರಾಜಧಾನಿ ಪಟನಾದಲ್ಲಿ ಹಸುವೊಂದರ ಹೊಟ್ಟೆಯಿಂದ 80 ಕೆಜಿ ಪಾಲಿಥೀನ್ ತ್ಯಾಜ್ಯವನ್ನು ಹೊರತೆಗೆಯಲಾಗಿದೆ. ಬುಧವಾರ ಇಲ್ಲಿನ ವೆಟರ್ನಿಟಿ ಕಾಲೇಜಿನಲ್ಲಿ ಬೀಡಾಡಿ ಹಸುವೊಂದನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಿ ಅದರ ಹೊಟ್ಟೆಯಿಂದ ಪಾಲೀಥೀನ್ ಕಸವನ್ನು ಹೊರತೆಗೆಯಲಾಗಿದೆ.

ಬಿಹಾರ ವೆಟರ್ನಿಟಿ ಕಾಲೇಜಿನ ಸರ್ಜರಿ ಮತ್ತು ರೇಡಿಯೋಲಜಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಜಿಡಿ ಸಿಂಗ್ ನೇತೃತ್ವದಲ್ಲಿ 6 ವರ್ಷದ ಹಸುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು, ಹಸುವಿನ ಹೊಟ್ಟೆಯಿಂದ ಪಾಲಿಥೀನ್ ಕಸವನ್ನು ಹೊರ ತೆಗೆಯಲು ಬರೋಬ್ಬರಿ 3ಗಂಟೆಗಳು ಬೇಕಾಯಿತು. ನಾಲ್ಕು ಮೈಕ್ರೋನ್‍ಗಿಂತ ತೆಳುವಿರುವ ಪಾಲಿಥೀನ್ ಕವರ್‍‍ಗಳು ಹಸುವಿನ ಹೊಟ್ಟೆಯಲ್ಲಿತ್ತು.

ನನ್ನ 13 ವರುಷದ ವೃತ್ತಿ ಜೀವನದಲ್ಲಿ ಹಸುವಿನ ಹೊಟ್ಟೆಯಿಂದ 80 ಕೆಜಿ ಪಾಲಿಥೀನ್ ಕಸವನ್ನು ಹೊರ ತೆಗೆದಿದ್ದು ಇದೇ ಮೊದಲ ಬಾರಿ ಎಂದು ಡಾ. ಸಿಂಗ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry