ಹಾಕಿ: ಎಎಸ್‌ಸಿಗೆ ಗೆಲುವು

7

ಹಾಕಿ: ಎಎಸ್‌ಸಿಗೆ ಗೆಲುವು

Published:
Updated:

ಬೆಂಗಳೂರು: ಎಎಸ್‌ಸಿ ತಂಡದವರು ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ 21ನೇ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

ಶಾಂತಿನಗರದಲ್ಲಿರುವ ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ 3–1 ಗೋಲುಗಳಿಂದ ಪೋಸ್ಟಲ್‌ ತಂಡವನ್ನು ಪರಾಭವಗೊಳಿಸಿತು.

ಎಎಸ್‌ಸಿ ತಂಡದ ಸೆರಿನ್‌ 2ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 14ನೇ ನಿಮಿಷದಲ್ಲಿ ಆನಂದ್‌ ನಾಗ್‌ ಗೋಲು ಗಳಿಸಿ 2–0ರ ಮುನ್ನಡೆಗೆ ಕಾರಣರಾದರು. 45ನೇ ನಿಮಿಷದಲ್ಲಿ ಎಂ.ನವೀನ್‌ ಕುಮಾರ್‌ ಗೋಲು ದಾಖಲಿಸಿದ್ದರಿಂದ ಪೋಸ್ಟಲ್‌ ತಂಡ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡಿತು. 47ನೇ ನಿಮಿಷದಲ್ಲಿ ಮೊರಹಾತಂತ್‌ ಗೋಲು ಬಾರಿಸಿ ಎಎಸ್‌ಸಿ ಸಂಭ್ರಮಕ್ಕೆ ಕಾರಣರಾದರು.

ದಿನದ ಇನ್ನೊಂದು ಪಂದ್ಯದಲ್ಲಿ ಕೆನರಾ ಬ್ಯಾಂಕ್‌ 3–2 ಗೋಲುಗಳಿಂದ ಡಿವೈಇಎಸ್‌ ತಂಡವನ್ನು ಸೋಲಿಸಿತು. ಆರಂಭದಿಂದಲೇ ಚುರುಕಿನ ಆಟ ಆಡಿದ ಕೆನರಾ ಬ್ಯಾಂಕ್‌ ತಂಡದ ಪರ 20ನೇ ನಿಮಿಷದಲ್ಲಿ ಕೆ.ಎಂ.ಸೋಮಣ್ಣ ಗೋಲು ಬಾರಿಸಿದರು. 29ನೇ ನಿಮಿಷದಲ್ಲಿ ಎ.ಬಿ.ಮಣಿಕಂಠ ಗೋಲು ಗಳಿಸಿ 1–1ರ ಸಮಬಲಕ್ಕೆ ಕಾರಣರಾದರು.

32ನೇ ನಿಮಿಷದಲ್ಲಿ ನಿಕಿನ್‌ ತಿಮ್ಮಯ್ಯ ಚೆಂಡನ್ನು ಗುರಿ ಮುಟ್ಟಿಸಿದರು. ಹೀಗಾಗಿ ಕೆನರಾ ಬ್ಯಾಂಕ್‌ 2–1ರ ಮುನ್ನಡೆ ಗಳಿಸಿತು. 53ನೇ ನಿಮಿಷದಲ್ಲಿ ಡಿವೈಇಎಸ್‌ ತಂಡದ ದಿಶಾಂತ್‌ ಗೋಲು ಹೊಡೆದಿದ್ದರಿಂದ 2–2ರ ಸಮಬಲವಾಯಿತು. ಆ ನಂತರ ಕೆನರಾ ಬ್ಯಾಂಕ್‌ ವೇಗದ ಆಟಕ್ಕೆ ಒತ್ತು ನೀಡಿತು. 68ನೇ ನಿಮಿಷದಲ್ಲಿ ಕೈಚಳಕ ತೋರಿದ ನಿಕಿನ್‌ ತಿಮ್ಮಯ್ಯ ತಂಡದಲ್ಲಿ ಸಂತಸ ಮೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry