ಬುಧವಾರ, ಡಿಸೆಂಬರ್ 11, 2019
21 °C

‘ಕಪ್ಪು ಗುಲಾಬಿ’ ಚಿತ್ರೀಕರಣ ಮುಕ್ತಾಯ

Published:
Updated:
‘ಕಪ್ಪು ಗುಲಾಬಿ’ ಚಿತ್ರೀಕರಣ ಮುಕ್ತಾಯ

ಸುನೀಲ್ ಪುರಾಣಿಕ್ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ‘ಕಪ್ಪುಗುಲಾಬಿ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರು ರಸ್ತೆ ಹಾಗೂ ರಾಮೋಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಮಾತಿನ ಭಾಗದ ಚಿತ್ರೀಕರಣ ಹಾಗೂ ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶವೊಂದನ್ನು ಮೊದಲ ಹಂತದ ಚಿತ್ರೀಕರಣದಲ್ಲಿ ಚಿತ್ರಿಸಿಕೊಳ್ಳಲಾಗಿದೆ.

ಸಾಗರ್ ಪುರಾಣಿಕ್, ನಿಖಿತಾ ನಾರಾಯಣ್, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್, ನಾಗೇಂದ್ರ ಶಾ, ಮಧು ಹೆಗಡೆ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನಾಯಕ ಸಾಗರ್ ಪುರಾಣಿಕ್ ಹಾಗೂ ನಾಯಕಿ ನಿಖಿತಾ ನಾರಾಯಣ್ ಅವರಿಗೆ ಚಿತ್ರೀಕರಣದ ಸಂದರ್ಭದಲ್ಲಿ ಸಣ್ಣ ಪೆಟ್ಟಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಹಿಂದೂಸ್ಥಾನ್ ಫಿಲ್ಮ್ಸ್‌ ಲಾಂಛನದಲ್ಲಿ ಆರ್.ವಿ.ರಮೇಶ್ ಯಾದವ್ ಅವರು ನಿರ್ಮಿಸುತ್ತಿದ್ದಾರೆ.  ಈ ಚಿತ್ರಕ್ಕೆ ಪವನ್ ಒಡೆಯರ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅಭಿಲಾಷ್ ಛಾಯಾಗ್ರಹಣ, ಕಾರ್ತಿಕ್ ಶರ್ಮ ಸಂಗೀತ ಸಂಯೋಜನೆ ಇದೆ.

ಪ್ರತಿಕ್ರಿಯಿಸಿ (+)