ಬುಧವಾರ, ಡಿಸೆಂಬರ್ 11, 2019
16 °C
ಸೋಮವಾರ ಮಳಿಗೆ ಉದ್ಘಾಟನೆ

ಪೋತಿಸ್‌ ಉತ್ಪನ್ನಗಳಿಗೆ ಪುನೀತ್‌ ರಾಯಭಾರಿ

Published:
Updated:
ಪೋತಿಸ್‌ ಉತ್ಪನ್ನಗಳಿಗೆ ಪುನೀತ್‌ ರಾಯಭಾರಿ

ಬೆಂಗಳೂರು: ದಕ್ಷಿಣ ಭಾರತದ ಜವಳಿ ಮಾರಾಟ ಸಂಸ್ಥೆ ಪೋತಿಸ್‌, ತನ್ನ 14ನೇ ಮಳಿಗೆಯನ್ನು ಇದೇ 26ರಂದುಬೆಂಗಳೂರಿನಲ್ಲಿ ಉದ್ಘಾಟಿಸಲಿದೆ.

‘ಕುಟುಂಬದ ಎಲ್ಲ ಸದಸ್ಯರಿಗೂ ಒಂದೇ ಕಡೆ ಉಡುಪುಗಳನ್ನು ಖರೀದಿಸಬಹುದಾದ ಮಳಿಗೆ ಇದಾಗಿದೆ. ಎಲ್ಲ ಸಮಾರಂಭಗಳಿಗೂ ಸೂಕ್ತ ಎನಿಸುವಂಥ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಸ್ತ್ರಗಳು ಇಲ್ಲಿ ದೊರೆಯಲಿವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇ

ಶಕ ರಮೇಶ್‌ ಪೋತಿ ಶುಕ್ರವಾರ ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಪೋತಿಸ್‌ನ ನೂತನ ಪ್ರಚಾರ ರಾಯಭಾರಿಯಾಗಿ ಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೇಮಕ ಮಾಡಿಕೊಂಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ನಟಿ ತಮನ್ನಾ ಕೂಡ ಪ್ರಚಾರ ರಾಯಭಾರಿಯಾಗಿದ್ದಾರೆ’ ಎಂದರು.

‘95 ವರ್ಷಗಳಿಂದ ನಮ್ಮ ಸಂಸ್ಥೆ ಜವಳಿ ಉದ್ಯಮವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಸಾಮುದ್ರಿಕಾ, ವಸ್ತ್ರಕಲಾ, ಪರಂಪರಾ, ವಸುಂಧರ, ಮಯೂರಿ ಮತ್ತು ಕಲಾಕ್ಷೇತ್ರದಂತಹ ಬ್ರ್ಯಾಂಡೆಡ್‌ ರೇಷ್ಮೆ ಪರಿಚಯಿಸಿದೆ.

‘ಕಾಂಚೀಪುರಂ, ಧರ್ಮವರಂ, ಬನಾರಸ್‌ ರೇಷ್ಮೆ ಉಡುಪುಗಳು, ಫ್ಯಾನ್ಸಿ, ಡಿಸೈನರ್ ಸೀರೆಗಳು, ಸಿದ್ಧ ಉಡುಪುಗಳು, ಕಾಟನ್, ಸಿಂಥೆಟಿಕ್‌ ಹೀಗೆ ಎಲ್ಲ ರೀತಿಯ ಜವಳಿಗಳು ಇಲ್ಲಿ ಸಿಗಲಿವೆ’ ಎಂದರು.

ನಟ ಪುನೀತ್ ರಾಜ್‌ಕುಮಾರ್ ಮಾತನಾಡಿ, ‘ಪ್ರಚಾರ ರಾಯಭಾರಿಯಾಗುವುದಕ್ಕೂ ಮುನ್ನ ಹಲವು ಬಾರಿ ಯೋಚಿಸುತ್ತೇನೆ. ಸಂಸ್ಥೆಗಳ ಗುಣಮಟ್ಟದ ಬಗ್ಗೆ ತಿಳಿದು ಕೊಳ್ಳುತ್ತೇನೆ. ಪೋತಿಸ್, 95 ವರ್ಷಗಳಿಂದ ಗುಣಮಟ್ಟದಲ್ಲಿ ರಾಜಿಯಾಗದೆ ಗ್ರಾಹಕ ವಿಶ್ವಾಸ ಗಳಿಸಿದೆ. ಇಂತಹ ಸಂಸ್ಥೆಗೆ ಪ್ರಚಾರ ರಾಯಭಾರಿಯಾಗಿರುವುದಕ್ಕೆ ಸಂತಸವಾಗುತ್ತಿದೆ’ ಎಂದರು.

ಇಲ್ಲಿನ ಕೆಂಪೇಗೌಡ ರಸ್ತೆಯಲ್ಲಿ ಈ ಮೊದಲು ಇದ್ದ ಸಾಗರ್‌ ಚಿತ್ರಮಂದಿರದ ಸ್ಥಳದಲ್ಲಿ ಹೊಸ ಮಳಿಗೆ ನಿರ್ಮಾಣವಾಗಿದೆ. ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಎಂಟು ಅಂತಸ್ತಿನ ಈ ಕಟ್ಟಡದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ವಿಭಾಗಗಳಿವೆ.

ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಖರೀದಿಗೆ ಬರುವ ಗ್ರಾಹಕರಿಗೆ ಶುಲ್ಕರಹಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಮೂರು ನೆಲ ಅಂತಸ್ತುಗಳನ್ನು ಇದಕ್ಕಾಗಿಯೇ ಮೀಸಲಿಡಲಾಗಿದೆ. ಖರೀದಿಗೆ ಉತ್ತೇಜನ ನೀಡಲು ಗ್ರಾಹಕರಿಗೆ ಪುರಸ್ಕಾರ ನೀಡುವ ಕಾರ್ಯಕ್ರಮಗಳನ್ನೂ ಪೋತಿಸ್‌ ಆಯೋಜಿಸಿದೆ.

ಪ್ರತಿಕ್ರಿಯಿಸಿ (+)