ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಳಒಪ್ಪಂದದ ಅಗತ್ಯ ನಮಗಿಲ್ಲ’

Last Updated 24 ಫೆಬ್ರುವರಿ 2018, 5:41 IST
ಅಕ್ಷರ ಗಾತ್ರ

ತಿ.ನರಸೀಪುರ: ‘ಸರ್ಕಾರದ ಆಡಳಿತ ವೈಖರಿ ಮುಂದಿಟ್ಟುಕೊಂಡು ಮತ ಕೇಳುತ್ತೇವೆಯೇ ಹೊರತು ಜೆಡಿಎಸ್ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡು ಗೆಲ್ಲುವ ಅನಿವಾರ್ಯತೆ ನಮಗಿಲ್ಲ’ ಎಂದು ಕ್ಷೇತ್ರದ ವಸತಿ ಯೋಜನೆಗಳ ಜಾಗೃತಿ ಸಮಿತಿ ಅಧ್ಯಕ್ಷ ಸುನಿಲ್ ಬೋಸ್ ಹೇಳಿದರು.

ಇಲ್ಲಿನ ಪೇಟೆಕೇರಿ ಬೀದಿಯಲ್ಲಿ ಶುಕ್ರವಾರ ₹ 50 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಅವಧಿಯ ಸ್ಥಿರ ಸರ್ಕಾರದ ಜತೆಗೆ ಅನೇಕ ಜನಪರ ಕಾರ್ಯಕ್ರಮ ನೀಡಿದ್ದಾರೆ. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮ ಅನುಷ್ಟಾನಗೊಳಿಸಿದ್ದಾರೆ. ಜನರು ಅಭಿವೃದ್ಧಿಗೆ ಆದ್ಯತೆ ನೀಡಿ ಮತ ನೀಡುತ್ತಾರೆ. ಜೆಡಿಎಸ್ ಜತೆ ಒಳಒಪ್ಪಂದ ಅಥವಾ ಮೈತ್ರಿ ಮಾಡಿಕೊಳ್ಳುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಮಗೆ ಬಂದಿಲ್ಲ ಎಂದರು.

ಯಾರು ಏನೇ ಹೇಳಿದರೂ ಅದು ರಾಜಕೀಯ ಪ್ರೇರಿತ ಆರೋಪ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಮತ್ತು ಶಾಶ್ವತ ಕಾಮಗಾರಿಗಳು ಜನರ ಕಣ್ಣಿಗೆ ಕಾಣುತ್ತಿವೆ. ಕ್ಷೇತ್ರದಿಂದ ತಂದೆಯವರಾದ ಮಹದೇವಪ್ಪ ಅಥವಾ ನಾನು ಇಬ್ಬರಲ್ಲಿ ಒಬ್ಬರು ಸ್ಪರ್ಧಿಸುವುದು ಖಚಿತ. ಯಾರು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ಕಾವೇರಿ ನೀರಾವರಿ ನಿಗಮದ ಮೂಲಕ ₹ 10 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. ಪುರಸಭೆ ವಿಶೇಷ ಘಟಕದ ಅನುದಾನ ₹ 3.25 ಕೋಟಿ ಬಳಕೆ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಅದರಲ್ಲಿ ಅಭಿವೃದ್ಧಿಗೊಳ್ಳದೆ ಬಾಕಿ ಉಳಿದಿದ್ದ ಪೇಟೆಕೇರಿ ಅಭಿವೃದ್ಧಿಗೆ ₹ 50 ಲಕ್ಷ ನೀಡಲಾಗಿದೆ ಎಂದು ತಿಳಿಸಿದರು.

ಜಿ.ಪಂ ಸದಸ್ಯ ಮಂಜುನಾಥನ್, ಪುರಸಭೆ ಅಧ್ಯಕ್ಷ ಸಿ.ಉಮೇಶ, ಉಪಾಧ್ಯಕ್ಷೆ ರತ್ನಮ್ಮ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನಾ, ಜೆಇ ಕೆ.ಪುರುಷೋತ್ತಮ, ಸ್ಥಾಯಿ ಸಮಿತಿ ಅಧ್ಯಕ್ಷ ನೈಸ್ ಮಹದೇವಸ್ವಾಮಿ, ಸದಸ್ಯರಾದ ಮಲ್ಲೇಶ, ರಾಘವೇಂದ್ರ, ಟಿ.ಜಿ.ಪುಟ್ಟಸ್ವಾಮಿ, ಮೀನಾಕ್ಷಿ, ಶಶಿಕಲಾ ಪ್ರಕಾಶ್, ನಾಮನಿರ್ದೆಶೀತ ಸದಸ್ಯರಾದ ಬಿ.ಮರಯ್ಯ, ಆಲಗೂಡು ನಾಗರಾಜು, ಮುದ್ದಬೀರನಹುಂಡಿ ಮಹದೇವ, ಗುಲ್ಜಾರ್ ಖಾನ್, ಆರೋಗ್ಯಾಧಿಕಾರಿ ಆರ್.ಚೇತನ್ ಕುಮಾರ್, ತಾ.ಪಂ ಸದಸ್ಯ ಕೆ.ಎಸ್.ಗಣೇಶ, ಮುಖಂಡರಾದ ಸಿ.ಮಹದೇವ, ಕನಕರಾಜು, ದಯಾನಂದ, ಕುಮಾರ, ಮಣಿಕಂಠ, ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT